Home ಟಾಪ್ ಸುದ್ದಿಗಳು ದೆಹಲಿ ಗಲಭೆಗೆ ಪಿತೂರಿ ಆರೋಪ: ಜಾಮೀನು ನಿರಾಕರಣೆ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಮೀರಾನ್ ಹೈದರ್

ದೆಹಲಿ ಗಲಭೆಗೆ ಪಿತೂರಿ ಆರೋಪ: ಜಾಮೀನು ನಿರಾಕರಣೆ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಮೀರಾನ್ ಹೈದರ್

ನವದೆಹಲಿ: 2020 ರಲ್ಲಿ ನಡೆದ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಪಿತೂರಿ ನಡೆಸಿದ ಆರೋಪದಲ್ಲಿ ಯುಎಪಿಎ ಮತ್ತು ಐಪಿಸಿ ಕಾಯ್ದೆ ಅಡಿಯಲ್ಲಿ ಬಂಧಿತ ಮೀರಾನ್ ಹೈದರ್ ಅವರ ಜಾಮೀನು ನಿರಾಕರಣೆ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಇದಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಮುಕ್ತಾ ಗುಪ್ತಾ, ಮಿನಿ ಪುಷ್ಕರ್ಣ ಅವರನ್ನೊಳಗೊಂಡ ವಿಭಾಗೀಯ ಪೀಠ, ಪ್ರಸಕ್ತ ಸ್ಥಿತಿಗತಿಗಳ ಕುರಿತು ವರದಿ ಸಲ್ಲಿಸಲು ಪ್ರಾಸಿಕ್ಯೂಷನ್ ಗೆ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.

ಈ ಮಧ್ಯೆ ಮರು ಅರ್ಜಿ ಸಲ್ಲಿಸಲು ಇನ್ನೂ ಮೂರು ವಾರಗಳ ಕಾಲಾವಕಾಶ ನೀಡಲಾಗಿದ್ದು, ಜುಲೈ 21 ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

ಏಪ್ರಿಲ್ 5 ರಂದು ನಗರದ ಕರ್ಕರ್ಡೂಮಾ ನ್ಯಾಯಾಲಯವು ಮೀರಾನ್ ಗೆ ಜಾಮೀನು ನಿರಾಕರಿಸಿತ್ತು.

Join Whatsapp
Exit mobile version