ಕಲ್ಲು ತೂರಾಟದ ಬಳಿಕ ಶಾಂತವಾಗಿದ್ದ ದಿಲ್ಲಿಯನ್ನು ಹೊತ್ತಿ ಉರಿಯುವಂತೆ ಮಾಡಿದ್ದ ರಾಗಿಣಿಯ ಬಂಧನ ಯಾವಾಗ ?

Prasthutha News

ಹೊಸದಿಲ್ಲಿ : ಕಳೆದ ಫೆಬ್ರವರಿಯಲ್ಲಿ ದೇಶದ ರಾಜಧಾನಿ ದಿಲ್ಲಿಯಲ್ಲಿ ಸಿಎಎ, ಎನ್.ಆರ್.ಸಿ ವಿರೋಧಿಸಿ ನಡೆದಿದ್ದ ಪ್ರತಿಭಟನೆಯು ಹಿಂಸಾರೂಪ ಪಡೆದು ಅಪಾರ ಆಸ್ತಿಪಾಸ್ತಿ ಹಾಗೂ ಜೀವ ಹಾನಿ ನಡೆದಿತ್ತು. ಇದೀಗ ಈ ಘಟನೆಯನ್ನು ವರದಿ ಮಾಡಲು ಹೋಗಿದ್ದ ಪತ್ರಕರ್ತರೊಬ್ಬರ ವಿಡಿಯೋ ವೈರಲ್ ಆಗುತ್ತಲೇ, ಕಲ್ಲು ತೂರಾಟದ ನಂತರ ಶಾಂತವಾಗಿದ್ದ ದಿಲ್ಲಿಯನ್ನು ಮಹಿಳೆಯೊಬ್ಬಳು ತನ್ನ ಪ್ರಚೊದನೆಯಿಂದಾಗಿ ಇಡೀ ದಿಲ್ಲಿ ಹೊತ್ತಿ ಉರಿಯುವಂತೆ ಮಾಡಿರುವ ವಿಡಿಯೋ ಬಹಿರಂಗವಾಗಿದೆ. ಈ ವಿಡಿಯೋ ಬಹಿರಂಗವಾಗುವುದರೊಂದಿಗೆ ಆಕೆಯನ್ನು ಯಾವಾಗ ಬಂಧಿಸಿ ಜೈಲಿಗಟ್ಟುತ್ತೀರಿ ಎಂದು ದಿಲ್ಲಿಯ ಜನತೆ ಕೇಳಲಾರಂಭಿಸಿದ್ದಾರೆ.

ಏನಿದು ಘಟನೆ:

ಸಿಎಎ, ಎನ್.ಆರ್.ಸಿಯ ಪರ ಹಾಗೂ ವಿರೋಧಿಗಳ ಮಧ್ಯೆ ದಿಲ್ಲಿಯಲ್ಲಿ ಫೆ. 23 ರಂದು ಆರಂಭವಾಗಿದ್ದ ಗಲಭೆಯು ಸುಮಾರು ಮೂರು ದಿನಗಳ ತನಕ ನಡೆದು ಹಿಂದೂ ಮುಸ್ಲಿಂ ಸಹಿತ ಸುಮಾರು 53 ಮಂದಿ ಸಾವನ್ನಪ್ಪಿದ್ದಲ್ಲದೆ ಸುಮಾರು 200 ಕ್ಕೂ ಮಿಕ್ಕಿದ ಜನರು ಗಾಯಾಳುಗಳಾಗಿದ್ದರು. ಇದಲ್ಲದೆ ಅಪಾರ ಆಸ್ತಿಪಾಸ್ತಿಗಳೂ ನಾಶವಾಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿ 2200 ಕ್ಕೂ ಮಿಕ್ಕಿದ ಜನರನ್ನು ಬಂಧಿಸಲಾಗಿದೆ.

ಫೆ. 23 ರಂದು ಎರಡೂ ತಂಡಗಳ ನಡುವೆ ಪರ ವಿರೋಧ ಘೋಷಣೆಗಳು ಕೂಗಲಾರಂಭಿಸಿದ್ದರು. ಇದೇ ಸಮಯದಲ್ಲಿ ಪರಸ್ಪರ ಕಲ್ಲು ತೂರಾಟವೂ ಆರಂಭವಾಗಿತ್ತು. ಆದರೆ, ಸುಮಾರು ಮಕ್ಕಾಲು ಗಂಟೆಯವರೆಗೆ ನಡೆದಿದ್ದ ಕಲ್ಲು ತೂರಾಟವು ಪೊಲೀಸರ ಲಾಠಿಚಾರ್ಜ್ ಹಾಗೂ ಅಶ್ರುವಾಯು ಸಿಡಿತದಿಂದ ಪರಿಸ್ಥಿತಿ ಶಾಂತವಾಗಿತ್ತು.

ಆದರೆ ದಿಲ್ಲಿ ಶಾಂತವಾಗುವುದನ್ನು ಸಹಿಸದ ಈ ರಾಗಿಣಿ ತಿವಾರಿ ಎಂಬ ಸಂಘಿ ಸಮಾಜದ್ರೋಹಿ  ಮಹಿಳೆಯು ಮತ್ತೆ ಗಲಭೆಕೋರರನ್ನು ಹಾಗೂ ಪೊಲೀಸರಿಗೆ ಪ್ರಚೋಧಿಸುತ್ತಾ, ಸ್ವತಃ ಕಲ್ಲು ತೂರಾಟ ನಡೆಸಿ, ಶಾಂತವಾಗಿದ್ದ ದಿಲ್ಲಿಯನ್ನು ಮೂರು ದಿನಗಳ ಕಾಲ ಹೊತ್ತಿ ಉರಿಸಿದ ಈ ಮಹಿಳೆಯನ್ನು ಯಾವಾಗ ಬಂಧಿಸುತ್ತೀರಿ ಎಂದು ದಿಲ್ಲಿಯ ಜನತೆ ಆಗ್ರಹಿಸುತ್ತಿದ್ದಾರೆ.

ಆ ಕುರಿತು ‘ದಿ ವೈರ್’ ಮಾಡಿರುವ ವಿಡಿಯೋ ವರದಿ ವೀಕ್ಷಿಸಿ:


Prasthutha News

Leave a Reply

Your email address will not be published. Required fields are marked *