Home ಟಾಪ್ ಸುದ್ದಿಗಳು ದೆಹಲಿ: ಸಿವಿಲ್ ಡಿಫೆನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಮ್ ಯುವತಿಯ ಅತ್ಯಾಚಾರ, ಕೊಲೆ

ದೆಹಲಿ: ಸಿವಿಲ್ ಡಿಫೆನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಮ್ ಯುವತಿಯ ಅತ್ಯಾಚಾರ, ಕೊಲೆ

ದೆಹಲಿ: ದೆಹಲಿ ಸಿವಿಲ್ ಡಿಫೆನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷ ಪ್ರಾಯದ ಮುಸ್ಲಿಮ್ ಯುವತಿಯನ್ನು ದೆಹಲಿಯ ಸಂಗಮ್ ವಿಹಾರ್ ದಿಂದ ಅಪಹರಿಸಿ, ಅತ್ಯಾಚಾರವೆಸಗಿ ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಆಗಸ್ಟ್ 26ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.


ಸಂತ್ರಸ್ತೆಯನ್ನು ಆಕೆಯ ಕೆಲಸದ ಸ್ಥಳದಿಂದ ಆಗಸ್ಟ್ 26 ರ ಸಂಜೆ ಅಪಹರಿಸಿ ಫರೀದಾಬಾದ್ ಗೆ ಕರೆದೊಯ್ದು ಅಲ್ಲಿ ಅತ್ಯಾಚಾರವೆಸಗಿ ಇರಿದು ಕೊಲೆ ಮಾಡಲಾಗಿದೆ ಎಂದು ಕುಟುಂಬ ಆರೋಪಿಸಿದೆ.
ಆಕೆಯ ದೇಹವನ್ನು ಬಾವಿಗೆ ಹಾಕಿದ್ದು, ದೇಹವನ್ನು ವಿರೂಪಗೊಳಿಸಲಾಗಿದ್ದು, ಆಕೆಯ ಸ್ತನಗಳನ್ನು ಕತ್ತರಿಸಲಾಗಿದೆ ಎಂದು ಕುಟುಂಬ ತಿಳಿಸಿದೆ.


ಸಂತ್ರಸ್ತೆಯ ಶವವನ್ನು ಫರಿದಾಬಾದ್ ಪೊಲೀಸರು ಪತ್ತೆ ಹಚ್ಚಿದ್ದು, ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ವೈದ್ಯಕೀಯ ವರದಿ ಇನ್ನೂ ಹೊರಬರಬೇಕಿದೆ.
ಘಟನೆಯ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಸಂತ್ರಸ್ತ ಕುಟುಂಬ ಮತ್ತು ವಿವಿಧ ಸಂಘಸಂಸ್ಥೆಗಳು ಪ್ರತಿಭಟನೆ ನಡಸಿವೆ.

Join Whatsapp
Exit mobile version