Home ಟಾಪ್ ಸುದ್ದಿಗಳು ಟ್ವಿಟರ್ ನಲ್ಲಿ ಬಿಜೆಪಿಗೆ ಉಂಟಾದ ಮುಖಭಂಗ ಮರೆಮಾಚಲು ಪೊಲೀಸರಿಂದ ಟ್ವಿಟರ್ ಕಚೇರಿಗೆ ದಾಳಿ – ಸುರ್ಜೇವಾಲಾ...

ಟ್ವಿಟರ್ ನಲ್ಲಿ ಬಿಜೆಪಿಗೆ ಉಂಟಾದ ಮುಖಭಂಗ ಮರೆಮಾಚಲು ಪೊಲೀಸರಿಂದ ಟ್ವಿಟರ್ ಕಚೇರಿಗೆ ದಾಳಿ – ಸುರ್ಜೇವಾಲಾ ಆರೋಪ

ಟ್ವಿಟರ್ ಕಚೇರಿಗಳ ಮೇಲೆ ದೆಹಲಿ ಪೊಲೀಸರು ‘ಹೇಡಿತನದ ದಾಳಿ’ ನಡೆಸುವ ಮೂಲಕ ಬಿಜೆಪಿ ನಾಯಕರ ‘ಮೋಸದ ಟೂಲ್‌ಕಿಟ್’ ಅನ್ನು ಮರೆಮಾಚಲು ವ್ಯರ್ಥ ಪ್ರಯತ್ನಗಳನ್ನು ಮಾಡಿದ್ದಾರೆ” ಎಂದು ರಣದೀಪ್‌ ಸುರ್ಜೇವಾಲಾ ಆರೋಪಿಸಿದ್ದಾರೆ.

ಕೊರೊನಾ ಟೂಲ್‌ಕಿಟ್ ಎಂಬ ಆರೋಪದ ಬಗ್ಗೆ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ಎರಡು ತಂಡಗಳು ಸೋಮವಾರ ಸಂಜೆ ದೆಹಲಿಯ ಲಾಡೋ ಸರಾಯ್ ಮತ್ತು ಗುರುಗ್ರಾಮದಲ್ಲಿರುವ ಮೈಕ್ರೋಬ್ಲಾಗಿಂಗ್ ಸೈಟ್‌ನ ಕಚೇರಿಗೆ ಭೇಟಿ ನೀಡಿದ್ದು, ದೆಹಲಿ ಪೊಲೀಸರ ತಂಡಗಳು ವಾಡಿಕೆಯ ಪ್ರಕ್ರಿಯೆಯ ಭಾಗವಾಗಿ ನೋಟಿಸ್ ನೀಡಲು ಟ್ವಿಟರ್ ಕಚೇರಿಗೆ ತೆರಳಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ, “ಬಿಜೆಪಿ ನಾಯಕರ ಮೋಸದ ಟೂಲ್‌ಕಿಟ್‌ ಅನ್ನು ಮರೆಮಾಚಲು ದೆಹಲಿ ಪೊಲೀಸರು ಟ್ವಿಟರ್ ಕಚೇರಿ ಮೇಲೆ ಹೇಡಿತನದ ದಾಳಿ ನಡೆಸುವ ಮೂಲಕ ಬಿಜೆಪಿಯ ವ್ಯರ್ಥ ಪ್ರಯತ್ನಗಳನ್ನು ಬಹಿರಂಗಪಡಿಸಿದೆ” ಎಂದರು.
“ನಕಲಿ ಟೂಲ್‌ಕಿಟ್ ತಯಾರಿಸಲು ಬಿಜೆಪಿಯು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದು, ಟೂಲ್‌ಕಿಟ್ ಅನ್ನು ಬಹಿರಂಗಪಡಿಸಿದ ನಂತರ, ಬಿಜೆಪಿ ಮತ್ತು ಮೋದಿ ಸರ್ಕಾರವು ಭಯಭೀತರಾಗಿ ದೆಹಲಿ ಮತ್ತು ಗುರುಗ್ರಾಮದ ಟ್ವಿಟರ್ ಕಚೇರಿಗಳ ಮೇಲೆ ‘ದಾಳಿ’ ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ.
ಇನ್ನು ಬಿಜೆಪಿ ಕೇಂದ್ರ ಕಚೇರಿ ಮತ್ತು ಅಧಿಕಾರದಲ್ಲಿ ಬಿಜೆಪಿಯ ತಪ್ಪಿತಸ್ಥರು ಕುಳಿತಿದ್ದು, ದೆಹಲಿ ಮತ್ತು ಗುರುಗ್ರಾಮದ ಟ್ವಿಟರ್ ಕಚೇರಿಗಳ ಮೇಲೆ ದಾಳಿ ಮಾಡುತ್ತಿದ್ದಾರೆ ಮತ್ತು ಅದಕ್ಕೆ ಕಾರಣವೇನು? ಎಂದು ಪ್ರಶ್ನಿಸಿದ್ದಾರೆ.

Join Whatsapp
Exit mobile version