Home ಟಾಪ್ ಸುದ್ದಿಗಳು ಚೀನಾ ಮಹಿಳೆ ನೇಪಾಳಿ ಸನ್ಯಾಸಿಯಾಗಿ ದೆಹಲಿಯಲ್ಲಿ ಪತ್ತೆ: ಗೂಢಚರ್ಯೆಯ ಶಂಕೆಯಲ್ಲಿ ಬಂಧನ

ಚೀನಾ ಮಹಿಳೆ ನೇಪಾಳಿ ಸನ್ಯಾಸಿಯಾಗಿ ದೆಹಲಿಯಲ್ಲಿ ಪತ್ತೆ: ಗೂಢಚರ್ಯೆಯ ಶಂಕೆಯಲ್ಲಿ ಬಂಧನ

ನವದೆಹಲಿ: ಉತ್ತರ ದೆಹಲಿಯ ಟಿಬೆಟಿಯನ್ ನಿರಾಶ್ರಿತರ ಶಿಬಿರದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ಶಂಕೆಯಲ್ಲಿ ಚೀನಾ ಮಹಿಳೆಯನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಆಕೆಯ ಹೆಸರನ್ನು ಡೋಲ್ಮಾ ಲಾಮಾ ಎಂದು ತೋರಿಸುವ ನೇಪಾಳದ ರಾಜಧಾನಿ ಕಠ್ಮಂಡುವಿನ ವಿಳಾಸದ ಕೆಲವೊಂದು ನಕಲಿ ದಾಖಲೆಗಳು ದೊರೆತ್ತಿದ್ದು, ಆಕೆಯ ನಿಜವಾದ ಹೆಸರು ಚೀನಾ ಮೂಲದ ಕಾಇ ರೂವೋ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿ ವಿಶ್ವವಿದ್ಯಾನಿಲಯದ ಉತ್ತರ ಕ್ಯಾಂಪಸ್ ಬಳಿ ಪ್ರವಾಸಿಗರಲ್ಲಿ ಜನಪ್ರಿಯವಾಗಿರುವ ಟಿಬೆಟಿಯನ್ ನಿರಾಶ್ರಿತರ ಶಿಬಿರದಲ್ಲಿ ಮಜ್ನು ಕಾ ತಿಲ್ಲಾದಲ್ಲಿ ಆಕೆ ವಾಸಿಸುತ್ತಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆಕೆ ಬೌದ್ಧ ಸನ್ಯಾಸಿಯ ಮಾರು ವೇಷದಲ್ಲಿ ವಾಸಿಸುತ್ತಿದ್ದು, ತನ್ನ ತಲೆಗೂದಲನ್ನು ಸಣ್ಣದು ಮಾಡಿ ಸಾಂಪ್ರಾದಾಯಿಕ ಆಳವಾದ ಕೆಂಪು ನಿಲುವಂಗಿಯನ್ನು ಧರಿಸಿದ್ದಳು ಎಂದು ಹೇಳಲಾಗಿದೆ.

ಕಾಇ ರೂವೋ ಎಂಬಾಕೆ 2019ರಲ್ಲಿ ಚೀನಾದ ಪಾಸ್ಫೋರ್ಟ್ ಬಳಸಿ ಭಾರತಕ್ಕೆ ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಾರಣೆಯ ವೇಳೆ ಚೀನಾದ ಕಮ್ಯೂನಿಸ್ಟ್ ಪಕ್ಷದ ಕೆಲವು ನಾಯಕರು ತನ್ನನ್ನು ಕೊಲ್ಲಲು ಬಯಸಿದ್ದರು ಎಂದು ಅವಳು ಮಾಹಿತಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆಕೆ ಇಂಗ್ಲಿಷ್, ಮ್ಯಾಂಡರಿನ್ ಮತ್ತು ನೇಪಾಳಿ ಭಾಷೆಯಲ್ಲಿ ಹಿಡಿತ ಸಾಧಿಸಿದ್ದಾಳೆ ಎಂದು ಮೂಲಗಳು ಮಾಹಿತಿ ನೀಡಿವೆ.

ಸದ್ಯ ಆಕೆಯನ್ನು ದೆಹಲಿ ಪೊಲೀಸರ ವಿಶೇಷ ಪಡೆ ಐಪಿಸಿ ಸೆಕ್ಷನ್ 120ಬಿ, 419, 420, 467, 474, 14ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆಯನ್ನು ನಡೆಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version