ಭಾರತ್ ಬಂದ್ ನಿಂದಾಗಿ ದೆಹಲಿ ಸ್ತಬ್ಧ; ದೆಹಲಿ-ಗುರು ಗ್ರಾಮ್ ಗಡಿಯಲ್ಲಿ ಒಂದೂವರೆ ಕಿ.ಮೀ ಟ್ರಾಫಿಕ್ ಜಾಮ್!

Prasthutha|

ಹೊಸದಿಲ್ಲಿ: ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಭಾರತ್ ಬಂದ್ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಸಂಪೂರ್ಣ ಸ್ತಬ್ಧಗೊಂಡಿದೆ. ರೈತರ ಆಂದೋಲನದ ಭಾಗವಾಗಿ ದೆಹಲಿ-ಗುರು ಗ್ರಾಮ್ ಗಡಿಯಲ್ಲಿ ಒಂದೂವರೆ ಕಿಲೋಮೀಟರ್ ಗೂ ಅಧಿಕ ಟ್ರಾಫಿಕ್ ಜಾಮ್ ಉಂಟಾಗಿದೆ.

- Advertisement -

ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿರುವ ದೃಶ್ಯಗಳು ವೈರಲ್ ಆಗಿದೆ. ಗುರು ಗ್ರಾಮದಿಂದ ದೆಹಲಿ ಪ್ರವೇಶಿಸುತ್ತಿದ್ದ ವಾಹನಗಳು ಭಾರೀ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡಿದೆ. ಬಂದ್‌ನ ಭಾಗವಾಗಿ ದೆಹಲಿ ಮತ್ತು ಗಡಿ ಪ್ರದೇಶಗಳಲ್ಲಿ ದೆಹಲಿ ಪೊಲೀಸರು ಭದ್ರತೆ ಬಿಗಿಗೊಳಿಸಿದ್ದರು.

ವೀಡಿಯೋ ವೀಕ್ಷಿಸಿ…

- Advertisement -

ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಮತ್ತು ಬೆಳೆಗಳಿಗೆ ಮೂಲ ಬೆಂಬಲ ಬೆಲೆಗಳನ್ನು ಒದಗಿಸಬೇಕೆಂದು ಒತ್ತಾಯಿಸಿ ಸುಮಾರು 40 ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ ಭಾರತ್ ಬಂದ್ ಗೆ ಕರೆ ನೀಡಿತ್ತು.

Join Whatsapp
Exit mobile version