Home ಟಾಪ್ ಸುದ್ದಿಗಳು ದೆಹಲಿ-ಮೀರತ್ ರೈಲ್ವೆ ಮಾರ್ಗದಲ್ಲಿ ಸುರಂಗ ನಿರ್ಮಾಣದ ಗುತ್ತಿಗೆ ಚೀನಾದ ಕಂಪೆನಿಗೆ! : ನೆಟ್ಟಿಗರಿಂದ ವ್ಯಂಗ್ಯ

ದೆಹಲಿ-ಮೀರತ್ ರೈಲ್ವೆ ಮಾರ್ಗದಲ್ಲಿ ಸುರಂಗ ನಿರ್ಮಾಣದ ಗುತ್ತಿಗೆ ಚೀನಾದ ಕಂಪೆನಿಗೆ! : ನೆಟ್ಟಿಗರಿಂದ ವ್ಯಂಗ್ಯ

ನವದೆಹಲಿ : ಮೇಕ್ ಇನ್ ಇಂಡಿಯಾ, ವೋಕಲ್ ಲೋಕಲ್, ಆತ್ಮನಿರ್ಭರ ಭಾರತ ಮುಂತಾದ ಹಲವು ಘೋಷಣೆಗಳ ಮೂಲಕ ಸ್ವದೇಶಿ ಚಿಂತನೆಯನ್ನು ಹರಡಿದ್ದ ಪ್ರಧಾನಿ ನರೇಂದ್ರ ಮೋದಿ ಸರಕಾರ ಇದೀಗ, ಕಾಮಗಾರಿಯೊಂದರ ಗುತ್ತಿಗೆಯನ್ನು ಚೀನಾದ ಕಂಪೆನಿಗೆ ನೀಡುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದೆ. ದೆಹಲಿ-ಮೀರತ್ ರ್ಯಾಪಿಡ್ ರೈಲು ಯೋಜನೆಯಡಿ 5.6 ಕಿ.ಮೀ. ಸುರಂಗ ಮಾರ್ಗ ಕಾಮಗಾರಿಯನ್ನು ನ್ಯಾಶನಲ್ ಕ್ಯಾಪಿಟಲ್ ರೀಜನಲ್ ಟ್ರಾನ್ಸ್ ಪೋರ್ಟ್ ಕಾರ್ಪೊರೇಶನ್ (NCRTC) ಚೀನಾ ಮೂಲದ ಕಂಪೆನಿಗೆ ನೀಡಿದೆ.

NCRTCಯಲ್ಲಿ ಕೇಂದ್ರ ಸರಕಾರಕ್ಕೆ ಶೇ.50 ಪಾಲಿದೆ. ಉಳಿದಂತೆ ಶೇ.50 ಪಾಲು ತಲಾ ಶೇ.12.5ರಂತೆ ದೆಹಲಿ, ರಾಜಸ್ಥಾನ, ಹರ್ಯಾಣ ಹಾಗೂ ಉತ್ತರ ಪ್ರದೇಶದ ಸರಕಾರಗಳು ಹೊಂದಿವೆ.

NCRTCಯು ನ್ಯೂ ಅಶೋಕ ನಗರದಿಂದ ಸಾಹಿಬಾಬಾದ್ ವರೆಗಿನ 5.6 ಕಿ.ಮೀ. ಸುರಂಗ ಮಾರ್ಗ ನಿರ್ಮಿಸುವ ಕಾಮಗಾರಿಯನ್ನು ಚೂನಾ ಮೂಲದ ಶಾಂಘೈ ಟನೆಲ್ ಇಂಜಿನಿಯರಿಂಗ್ ಕಂಪೆನಿ ಲಿಮಿಟೆಡ್ ಗೆ ನೀಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧಗಳು ವ್ಯಕ್ತವಾಗಿದ್ದು, ನೆಟ್ಟಿಗರು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇತ್ತೀಚೆಗೆ ಗಡಿ ಪ್ರದೇಶದಲ್ಲಿ ಚೀನಾ ಮತ್ತು ಭಾರತ ಸೇನೆಗಳ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿದ್ದ ವೇಳೆ ಚೀನಾದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ವೇಳೆ ಚೀನಾದ ಕೆಲವೊಂದು ಆಪ್ ಗಳನ್ನು ಭಾರತ ನಿಷೇಧಿಸಿತ್ತು. ಇದೀಗ ಚೀನಾದ ಸಂಸ್ಥೆಗೆ ಕಾಮಗಾರಿಯ ಗುತ್ತಿಗೆ ನೀಡಿರುವುದನ್ನು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.

ಕೆಲವೊಂದು ಆಯ್ದ ಟ್ವೀಟ್ ಗಳನ್ನು ಇಲ್ಲಿ ನೀಡಲಾಗಿದೆ.   

Join Whatsapp
Exit mobile version