Home ಟಾಪ್ ಸುದ್ದಿಗಳು ಜನವರಿ 24ರಂದು ದೆಹಲಿ ಮೇಯರ್ ಚುನಾವಣೆ

ಜನವರಿ 24ರಂದು ದೆಹಲಿ ಮೇಯರ್ ಚುನಾವಣೆ

ನವದೆಹಲಿ: ದೆಹಲಿ ಲೆಫ್ಟಿನೆಂಟ್ ಸಕ್ಸೇನಾ ಅವರು ಜನವರಿ 24ರಂದು ಮೇಯರ್ ಚುನಾವಣೆ ಮತ್ತೆ ನಡೆಸಲು ಒಪ್ಪಿಗೆ ಸೂಚಿಸಿದ್ದಾರೆ.


ಜನವರಿ 24ರ ಬೆಳಿಗ್ಗೆ 11 ಗಂಟೆಗೆ ದೆಹಲಿ ಮನಪಾ ಮೇಯರ್ ಚುನಾವಣೆ ನಡೆಸಲು ನಾನು ಈ ಮೂಲಕ ಅಂಕಿತ ಹಾಕಿದ್ದಾಗಿ ಸಕ್ಸೇನಾ ಹೇಳಿದ್ದಾರೆ.


ಬಹುಮತದ ಆಮ್ ಆದ್ಮಿ ಪಕ್ಷವು 18, 20, 22, 24 ನಾಲ್ಕು ದಿನಾಂಕಗಳನ್ನು ಸೂಚಿಸಿತ್ತು. ಕಳೆದ ಎಂಟು ತಿಂಗಳುಗಳಿಂದ ಮೇಯರ್ ಇಲ್ಲದ ಮನಪಾ ಆಡಳಿತವು ಅಧಿಕಾರಿಗಳಿಂದ ನಡೆಯುತ್ತಿದೆ. ಇನ್ನೂ ತಡವಾಗುವುದು ತರವಲ್ಲ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಜನವರಿ 6ರಂದು ಮೇಯರ್ ಚುನಾವಣೆ ಗೊತ್ತಾಗಿದ್ದುದು ಬಿಜೆಪಿಯವರ ಗಲಾಟೆಯಿಂದ ರದ್ದಾಗಿತ್ತು.

Join Whatsapp
Exit mobile version