Home ಟಾಪ್ ಸುದ್ದಿಗಳು ಇಸ್ಲಾಮ್ ಸ್ವೀಕರಿಸಿದ ಯುವತಿಗೆ ರಕ್ಷಣೆ ಮುಂದುವರಿಸುವಂತೆ ಹೈಕೋರ್ಟ್ ಸೂಚನೆ

ಇಸ್ಲಾಮ್ ಸ್ವೀಕರಿಸಿದ ಯುವತಿಗೆ ರಕ್ಷಣೆ ಮುಂದುವರಿಸುವಂತೆ ಹೈಕೋರ್ಟ್ ಸೂಚನೆ

ಇಸ್ಲಾಮ್ ಸ್ವೀಕರಿಸಿದ ಕಾರಣಕ್ಕೆ ತಮಗೆ ಬೆದರಿಕೆ ಬರುತ್ತಿದೆ ಎಂದು ಅರ್ಜಿ ಸಲ್ಲಿಸಿದ್ದ ಯುವತಿಗೆ ರಕ್ಷಣೆ ಮುಂದುವರಿಸುವಂತೆ ದೆಹಲಿ ಹೈಕೋರ್ಟ್ ಸೋಮವಾರ ಆದೇಶ ನೀಡಿದೆ.
ಈ ಹಿಂದೆ ನೀಡಿದ್ದ ಮಧ್ಯಂತರ ರಕ್ಷಣೆಯನ್ನು ಜುಲೈ 22ರವರೆಗೆ ವಿಸ್ತರಿಸಿ ಸೋಮವಾರ ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದೆ.


ಇಸ್ಲಾಮ್ ಗೆ ಮತಾಂತರ ಹೊಂದಿದ ಹಿನ್ನೆಲೆಯಲ್ಲಿ ತನ್ನ ಜೀವಕ್ಕೆ ಮತ್ತು ಹತ್ತಿರದ ಕುಟುಂಬ ಸದಸ್ಯರಿಗೆ ತೀವ್ರ ಬೆದರಿಕೆ ಇದೆ. ಉತ್ತರ ಪ್ರದೇಶ ಪೊಲೀಸರು ಕೂಡ ನಮ್ಮ ಕುಟುಂಬವನ್ನು ಗುರಿಯಾಗಿಸಿಕೊಂಡಿದ್ದಾರೆ. ಆದ್ದರಿಂದ ರಕ್ಷಣೆ ನೀಡಬೇಕು ಎಂದು ಅರ್ಜಿಯಲ್ಲಿ ಯುವತಿ ಮನವಿ ಮಾಡಿದ್ದಳು.
ಆದಾಗ್ಯೂ, ಅರ್ಜಿಯ ಪ್ರತಿಯನ್ನು ಮುಂದಿನ ವಿಚಾರಣೆಯ ದಿನಾಂಕದಂದು ಉತ್ತರ ಪ್ರದೇಶಕ್ಕೆ ನೀಡಬೇಕೆಂದು ನ್ಯಾಯಮೂರ್ತಿ ರೇಖಾ ಪಲ್ಲಿ ಕೇಳಿದರು.

Join Whatsapp
Exit mobile version