ಡಾಬರ್ ಚ್ಯವನಪ್ರಾಶ್ ವಿರುದ್ಧ ಪತಂಜಲಿ ಜಾಹೀರಾತುಗಳಿಗೆ ದೆಹಲಿ ಹೈಕೋರ್ಟ್ ನಿರ್ಬಂಧ

- Advertisement -

ನವದೆಹಲಿ: ಡಾಬರ್ ಚ್ಯವನಪ್ರಾಶ್ ವಿರುದ್ಧ ಅವಹೇಳನಕಾರಿ ಜಾಹೀರಾತುಗಳನ್ನು ಪ್ರಕಟಿಸದಂತೆ ಪತಂಜಲಿ ಸಂಸ್ಥೆಗೆ ದೆಹಲಿ ಹೈಕೋರ್ಟ್‌ ಗುರುವಾರ ನಿರ್ಬಂಧ ಹೇರಿದೆ.

- Advertisement -

ಪತಂಜಲಿ ಸಂಸ್ಥೆ ತನ್ನ ವಿರುದ್ಧ ನೀಡುತ್ತಿರುವ ಅವಹೇಳನಕಾರಿ ಜಾಹೀರಾತುಗಳ ಪ್ರಸಾರಕ್ಕೆ ತಡೆ ನೀಡಬೇಕು ಎಂದು ಕೋರಿ ಡಾಬರ್‌, ಹೈಕೋರ್ಟ್‌ ಮೆಟ್ಟಿಲೇರಿತ್ತು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಿನಿ ಪುಷ್ಕರ್ಣ ನೇತೃತ್ವದ ಪೀಠ, ಮನವಿಯನ್ನು ಮಾನ್ಯ ಮಾಡಿರುವುದಾಗಿ ಹೇಳಿದೆ.

- Advertisement -

ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಜುಲೈ 14ಕ್ಕೆ ಮುಂದೂಡಿದೆ.

- Advertisement -


Must Read

Related Articles