‘ರೋಜ್ಗಾರ್ ಬಜೆಟ್’ ಮಂಡಿಸಿದ ದೆಹಲಿ ಸರ್ಕಾರ: 20 ಲಕ್ಷ ಉದ್ಯೋಗಗಳ ಭರವಸೆ

Prasthutha|

ನವದೆಹಲಿ: ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ಕೋವಿಡ್ -19 ಸಾಂಕ್ರಾಮಿಕ ಮತ್ತು ನಂತರದ ಲಾಕ್ ಡೌನ್ ನಿಂದ ಉಂಟಾದ ಹಾನಿಗಳಿಂದ ಚೇತರಿಸಿಕೊಳ್ಳಲು ಉದ್ಯೋಗ ಸೃಷ್ಟಿ  ಗಮನದಲ್ಲಿಟ್ಟುಕೊಂಡು ದೆಹಲಿಯ ಹಣಕಾಸು ಸಚಿವ ಮನೀಶ್ ಸಿಸೋಡಿಯಾ ಶುಕ್ರವಾರ 2022-23 ಕ್ಕೆ ರೂ 75,800-ಕೋಟಿ “ರೋಜ್ಗಾರ್ ಬಜೆಟ್” ಮಂಡಿಸಿದರು.

- Advertisement -

67,000 ಕೋಟಿ ರೂ.ಗಳಷ್ಟಿದ್ದ ಹಿಂದಿನ ವರ್ಷದ ಬಜೆಟ್ನ ಪರಿಷ್ಕೃತ ಅಂದಾಜಿಗೆ ಹೋಲಿಸಿದರೆ ಮುಂಬರುವ ಹಣಕಾಸು ವರ್ಷದ ಬಜೆಟ್ ಸುಮಾರು 13.3 ಪ್ರತಿಶತದಷ್ಟು ಹೆಚ್ಚಳವನ್ನು ಕಂಡಿದೆ. 2021-23ಕ್ಕೆ ಮಂಡಿಸಿದ ಒಟ್ಟು ಬಜೆಟ್ 69,000 ಕೋಟಿ ರೂ ಎಂದು ಹೇಳಲಾಗಿದೆ.

Join Whatsapp
Exit mobile version