Home ಟಾಪ್ ಸುದ್ದಿಗಳು ದೆಹಲಿ ಅಬಕಾರಿ ನೀತಿ ಪ್ರಕರಣ: ಎಎಪಿ ಮುಖಂಡ ದುರ್ಗೇಶ್ ಪಾಠಕ್ ಗೆ ಇಡಿ ಸಮನ್ಸ್

ದೆಹಲಿ ಅಬಕಾರಿ ನೀತಿ ಪ್ರಕರಣ: ಎಎಪಿ ಮುಖಂಡ ದುರ್ಗೇಶ್ ಪಾಠಕ್ ಗೆ ಇಡಿ ಸಮನ್ಸ್

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಹಿರಿಯ ನಾಯಕ ಮತ್ತು ರಾಜಿಂದರ್ ನಗರ ಶಾಸಕ ದುರ್ಗೇಶ್ ಪಾಠಕ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ ಸಮನ್ಸ್ ಜಾರಿ ಮಾಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಡಿಸಿಎಂ ಮನೀಶ್ ಸಿಸೋಡಿಯಾ, “ದೆಹಲಿ ಸರ್ಕಾರದ ಮದ್ಯ ನೀತಿಗೂ ನಮ್ಮ ಎಂಸಿಡಿ ಉಸ್ತುವಾರಿಗೂ ಏನು ಸಂಬಂಧ? ಅವರ ಟಾರ್ಗೆಟ್ ಲಿಕ್ಕರ್ ಪಾಲಿಸಿಯೇ ಅಥವಾ ಎಂಸಿಡಿ ಚುನಾವಣೆಯೇ? ಎಂದು ಪ್ರಶ್ನಿಸಿದ್ದಾರೆ.

ಪಾಠಕ್ ಅವರು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಚುನಾವಣೆಯ ಪಕ್ಷದ ಉಸ್ತುವಾರಿಯಾಗಿದ್ದಾರೆ.

ರಾಜ್ಯಪಾಲ ವಿ.ಕೆ.ಸಕ್ಸೇನಾ ಅವರ ಶಿಫಾರಸಿನ ಮೇರೆಗೆ ಕೇಂದ್ರ ಏಜೆನ್ಸಿಗಳು ದೆಹಲಿ ಅಬಕಾರಿ ನೀತಿ ಪ್ರಕರಣದ ತನಿಖೆ ನಡೆಸುತ್ತಿದ್ದು, ಆಗಸ್ಟ್ ಆರಂಭದಲ್ಲಿ ಮನೀಶ್ ಸಿಸೋಡಿಯಾ ಅವರ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿತ್ತು.

Join Whatsapp
Exit mobile version