Home ಟಾಪ್ ಸುದ್ದಿಗಳು ದೆಹಲಿ: ನ್ಯೂ ಫ್ರೆಂಡ್ಸ್ ಕಾಲೋನಿ, ಮಂಗೋಲ್ ಪುರಿಯಲ್ಲಿ ಮುಂದುವರಿದ ಬುಲ್ಡೋಝರ್ ಕಾರ್ಯಾಚರಣೆ

ದೆಹಲಿ: ನ್ಯೂ ಫ್ರೆಂಡ್ಸ್ ಕಾಲೋನಿ, ಮಂಗೋಲ್ ಪುರಿಯಲ್ಲಿ ಮುಂದುವರಿದ ಬುಲ್ಡೋಝರ್ ಕಾರ್ಯಾಚರಣೆ

ನವದೆಹಲಿ: ದೆಹಲಿ ಮುನ್ಸಿಪಾಲ್ ಕಾರ್ಪೋರೇಷನ್, ಶಾಹೀನ್ ಬಾಗ್ ನಲ್ಲಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ನಡೆಸಿದ ಒಂದು ದಿನದ ಬಳಿಕ ಆದಿತ್ಯನಾಥ್ ಬುಲ್ಡೋಝರ್ ಗಳು ಅಕ್ರಮ ಕಟ್ಟಡ ತೆರವುಗೊಳಿಸಲು ಇದೀಗ ನ್ಯೂ ಫ್ರೆಂಡ್ಸ್ ಕಾಲೋನಿ ಮತ್ತು ಮಂಗೋಲ್ ಪುರಿಯನ್ನು ತಲುಪಿದೆ ಎಂದು ತಿಳಿದು ಬಂದಿವೆ.

ರೋಹಿಂಗ್ಯಾ, ಬಾಂಗ್ಲಾದೇಶಿ ಮತ್ತು ಸಮಾಜ ವಿರೋಧಿಗಳ ಅತಿಕ್ರಮಣವನ್ನು ತಡೆಯುವ ನೆಪದಲ್ಲಿ ಏಪ್ರಿಲ್ 20 ರಂದು ದೆಹಲಿಯ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ಅವರು ಬಿಜೆಪಿ ಅಧಿಕಾರದಲ್ಲಿರುವ ದಕ್ಷಿಣ ದೆಹಲಿ ಪಾಲಿಕೆಯ ಮೇಯರ್ ಗೆ ಪತ್ರ ಬರೆದ ನಂತರ SDMC ಅತಿಕ್ರಮಣ ತೆರವು ಕಾರ್ಯಾಚರಣೆ ಅಭಿಯಾನವನ್ನು ಆರಂಭಿಸಿತ್ತು.

ಉತ್ತರ ದೆಹಲಿಯ ಮುನ್ಸಿಪಾಲ್ ಕಾರ್ಪೋರೇಷನ್, ಜಹಾಂಗೀರ್ ಪುರಿಯಲ್ಲಿ ಅತಿಕ್ರಮಣ ವಿರೋಧಿ ಕಾರ್ಯಾಚರಣೆಯು ಕಟ್ಟಡಗಳನ್ನು ತೆರವುಗೊಳಿಸಿದ ನಂತರ ಹಲವಾರು ಸ್ಥಳೀಯ ನಾಗರಿಕರು ಮತ್ತು ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಸುಪ್ರೀಮ್ ಕೋರ್ಟ್ ಮಧ್ಯಪ್ರದೇಶದ ಬಳಿಕ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.

ಈ ಮಧ್ಯೆ ಶಾಹೀನ್ ಬಾಗ್ ಸೇರಿದಂತೆ ಹಲವು ಪ್ರದೇಶ ಅತಿಕ್ರಮಣ ಕಟ್ಟಡಗಳನ್ನು ತೆರವುಗೊಳಿಸಲು SDMC 10 ದಿನಗಳ ಗಡುವು ಮತ್ತು ಯೋಜನೆಯನ್ನು ಸಿದ್ಧಪಡಿಸಿದೆ.

Join Whatsapp
Exit mobile version