Home ಟಾಪ್ ಸುದ್ದಿಗಳು ದ್ವೇಷ ಭಾಷಣ: ಸುದರ್ಶನ್ ಟಿವಿ, ಸುರೇಶ್ ಚವ್ಹಾಂಕೆ ವಿರುದ್ಧದ ಅರ್ಜಿ ವಿಚಾರಣೆಗೆ ದೆಹಲಿ ಕೋರ್ಟ್ ಅಸ್ತು

ದ್ವೇಷ ಭಾಷಣ: ಸುದರ್ಶನ್ ಟಿವಿ, ಸುರೇಶ್ ಚವ್ಹಾಂಕೆ ವಿರುದ್ಧದ ಅರ್ಜಿ ವಿಚಾರಣೆಗೆ ದೆಹಲಿ ಕೋರ್ಟ್ ಅಸ್ತು

ನವದೆಹಲಿ: ಸುದರ್ಶನ್ ಟಿವಿಯ “ಬಿಂದಾಸ್ ಬೋಲ್” ಶೋನಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಹರಡಲಾಗಿದೆ ಎಂದು ಆರೋಪಿಸಿ ಸುದರ್ಶನ್ ಟಿವಿ ವಿರುದ್ಧ ಸಲ್ಲಿಸಲಾದ ಕ್ರಿಮಿನಲ್ ದೂರಿನ ವಿಚಾರಣೆಯನ್ನು ದೆಹಲಿ ನ್ಯಾಯಾಲಯವು ಕೈಗೆತ್ತಿಕೊಂಡಿದೆ.

ಮೇ 2021 ರಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ, ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಚವ್ಹಾಂಕೆ ಮುಸ್ಲಿಮ್ ಸಮುದಾಯದ ವಿರುದ್ಧ ದ್ವೇಷ ಹರಡಿದ್ದಾರೆ ಎಂದು ಆರೋಪಿಸಿ ಜಾಫರ್ ಹುಸೇನ್ ಎಂಬವರು ದೂರು ದಾಖಲಿಸಿದ್ದರು.

ಕಾರ್ಯಕ್ರಮವು ಫೆಲೆಸ್ತೀನ್-ಇಸ್ರೇಲ್ ಸಂಘರ್ಷದ ಬಗ್ಗೆ ಇರುವಾಗ, ಸೌದಿ ಅರೇಬಿಯಾದ ಮಸೀದಿಯ ಮೇಲೆ ಬಾಂಬ್ ಸ್ಫೋಟಿಸಿದ ಎಡಿಟ್ ಮಾಡಿದ ವೀಡಿಯೊವನ್ನು ತೋರಿಸುವ ಮೂಲಕ ಚವ್ಹಾಂಕೆ ಮುಸ್ಲಿಮರನ್ನು ಪ್ರಚೋದಿಸಲು ಪ್ರಯತ್ನಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಒಂದು ಸಮುದಾಯದ ಜನರ ಹೆಸರನ್ನು ಕೆಡಿಸುವ ಉದ್ದೇಶದಿಂದ ಮತ್ತು ಗಲಭೆಗಳಿಗೆ ಪ್ರಚೋದಿಸುವ ಉದ್ದೇಶದಿಂದ ಸುದರ್ಶನ್ ಟಿವಿಯಲ್ಲಿ ಈ ವೀಡಿಯೊಗಳನ್ನು ಹಲವಾರು ಬಾರಿ ತೋರಿಸಲಾಗಿದೆ ಎಂದು ಹುಸೇನ್ ಆರೋಪಿಸಿದ್ದಾರೆ.

ದೆಹಲಿಯ ಪ್ರೇಮ್ ನಗರ ವಾಯವ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಇದು ಚಾನೆಲ್ ಮತ್ತು ಅದರ ಸಂಪಾದಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದೆ ಎಂದು ಅವರು ಹೇಳಿದ್ದಾರೆ.

Join Whatsapp
Exit mobile version