ಕೊಲೆ ಆರೋಪಿ ಸುಶೀಲ್ ಕುಮಾರ್ ಜೊತೆ ಸೆಲ್ಫಿಗಾಗಿ ಮುಗಿಬಿದ್ದ ದಿಲ್ಲಿ ಪೋಲಿಸ್ !

Prasthutha|

ದೆಹಲಿ : ಕುಸ್ತಿಪಟು ಸಾಗರ್ ಧಂಕರ್ ಕೊಲೆ ಆರೋಪದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಕುಸ್ತಿ ಪಟು ಸುಶೀಲ್ ಕುಮಾರ್ ಜೊತೆ ದೆಹಲಿ ಪೋಲಿಸರು ಸೆಲ್ಫಿಗಾಗಿ ಮುಗಿ ಬಿದ್ದಿದ್ದಾರೆ. ಪೋಲಿಸರ ನಡೆವಳಿಕೆಯು ವ್ಯಾಪಕ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆಯೇ ಪೋಲಿಸ್ ಮುಖ್ಯಸ್ಥರು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

- Advertisement -

ಕೊಲೆ ಆರೋಪಿ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ಶುಕ್ರವಾರ ಬೆಳಗ್ಗೆ ಮಂಡೋಲಿ ಜೈಲಿನಿಂದ ತಿಹಾರ ಜೈಲಿಗೆ ಕರೆದೊಯ್ಯುತ್ತಿದ್ದ ವೇಳೆ ದೆಹಲಿ ಸಶಸ್ತ್ರ ವಿಶೇಷ ತಂಡ ಹಾಗೂ 3ನೇ ಬೆಟಾಲಿಯನ್ ಪೋಲಿಸರು ಈ ಪೋಟೊಗಳನ್ನು ಕ್ಲಿಕ್ಕಿಸಿದ್ದಾರೆ ಎಂದು ತಿಳಿದು ಬಂದಿದೆ.

ಪೋಲಿಸರು ಕೊಲೆ ಆರೋಪಿಯನ್ನು ಗಣ್ಯ ಅತಿಥಿಯೆಂಬಂತೆ ಬಿಂಬಿಸಿದ್ದಾರೆ ಎಂದು ವಿರೋಧಗಳು ವ್ಯಕ್ತವಾಗುತ್ತಿದ್ದಂತೆ ಫೊಟೋ ಕ್ಲಿಕ್ಕಿಸಿದ ಪೋಲಿಸರ ವಿರುದ್ದ ಘಟನೆಯ ವಿಚಾರಣೆಗೆ ಆದೇಶ ನೀಡಲಾಗಿದೆ.



Join Whatsapp