Home ಟಾಪ್ ಸುದ್ದಿಗಳು ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆಯನ್ನು ಕಾರಲ್ಲಿ ಸಿಕ್ಕಿಸಿ ಎಳೆದೊಯ್ದ ಆರೋಪಿಯ ಬಂಧನ

ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆಯನ್ನು ಕಾರಲ್ಲಿ ಸಿಕ್ಕಿಸಿ ಎಳೆದೊಯ್ದ ಆರೋಪಿಯ ಬಂಧನ

ನವದೆಹಲಿ: ದೆಹಲಿಯಲ್ಲಿ ಮಹಿಳಾ ಸುರಕ್ಷತೆ ಬಗ್ಗೆ ತನಿಖೆ ಮಾಡುತ್ತಿದ್ದ ದಿಲ್ಲಿ ಮಹಿಳಾ ಆಯೋಗ -ಡಿಸಿಡಬ್ಲ್ಯು ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರ ಮೇಲೆಯೇ ಲೈಂಗಿಕ ದೌರ್ಜನ್ಯ ನಡೆದಿದ್ದು, ಅವರನ್ನು ಕಾರಿನ ಬಾಗಿಲಿಗೆ ಸಿಕ್ಕಿಸಿ ಅಲ್ಪ ದೂರ ಎಳೆದೊಯ್ದ ಘಟನೆ ನಡೆದಿದೆ.


ಸ್ವಾತಿ ಮಲಿವಾಲ್ ಅವರನ್ನು ವ್ಯಕ್ತಿಯೋರ್ವ ತನ್ನ ಕಾರಿನ ಬಾಗಿಲಿಗೆ ಸಿಕ್ಕಿಸಿ 10- 15 ಮೀಟರ್ ದೂರ ಎಳೆದಾಡಿದ್ದಾನೆ. ಆರೋಪಿ ಹರೀಶ್ ಚಂದ್ರ (47) ಎಂಬಾತನನ್ನು ಬಂಧಿಸಿ ಎಫ್’ಐಆರ್ ದಾಖಲಿಸಲಾಗಿದೆ.
“ನನ್ನ ಕೈಯನ್ನು ಕಾರಿಗೆ ಲಾಕ್ ಮಾಡಿ ಎಳೆದದ್ದರಿಂದ ನನ್ನ ಬಟ್ಟೆ ಅಸ್ತವ್ಯಸ್ತವಾಯಿತು. ಅಪರಾಧಿ ಚಾಲಕನು ಕಿರುಕುಳ ನೀಡಿದ್ದಾನೆ. ಲೈಂಗಿಕ ಕಿರುಕುಳ ನೀಡುವ ಉದ್ದೇಶವನ್ನು ಆತ ಹೊಂದಿದ್ದಿರಬಹುದು” ಎಂದು ಮಲಿವಾಲ್ ದೂರಿದ್ದಾರೆ. ಆ ಬಗ್ಗೆ ಟ್ವೀಟ್ ಕೂಡ ಮಾಡಿದ್ದಾರೆ.


ಆರೋಪಿಯು ಕುಡಿತದ ಅಮಲಿನಲ್ಲಿದ್ದ. ಆತನ ವೈದ್ಯಕೀಯ ಪರೀಕ್ಷೆ ನಡೆಸಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ. ಸ್ವಾತಿಯವರು ತಮ್ಮ ತಂಡದೊಡನೆ ಫುಟ್ಬಾಲ್’ನಲ್ಲಿ ಮಹಿಳಾ ದೌರ್ಜನ್ಯಗಳ ಬಗ್ಗೆ ವಿಚಾರಣೆ ನಡೆಸುತ್ತಿದ್ದಾಗಲೇ ಈ ಮಹಿಳಾ ದೌರ್ಜನ್ಯ ನಡೆದಿದೆ.
ದಿಲ್ಲಿಯ ಎಐಐಎಂಎಸ್ ಗೇಟಿನ ಬಳಿ ಮುಂಜಾನೆ ಈ ಘಟನೆ ನಡೆದಿದೆ. ಕೆಲವು ದೂರುಗಳಿದ್ದುದರಿಂದ ಮೂರು ಗಂಟೆಗೇ ತನ್ನ ತಂಡದೊಡನೆ ಮಲಿವಾಲ್ ಅಲ್ಲಿಗೆ ಹೋಗಿದ್ದರು

Join Whatsapp
Exit mobile version