ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ) ನಡೆಸುತ್ತಿರುವ ವಿಚಾರಣೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ 5ನೇ ಸಲವೂ ಗೈರಾಗಿದ್ದಾರೆ.
ಅಬಕಾರಿ ನೀತಿ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಹಗರಣದ ವಿಚಾರಣೆ ಸಂಬಂಧ ಕೇಜ್ರಿವಾಲ್ ಅವರಿಗೆ ಬುಧವಾರ 5ನೇ ಸಮನ್ಸ್/ನೋಟಿಸ್ ನೀಡಿದ್ದ ಇ.ಡಿ ಅಧಿಕಾರಿಗಳು, ಇಂದು (ಫೆ.2ರಂದು) ವಿಚಾರಣೆಗೆ ಬರುವಂತೆ ಸೂಚಿಸಿದ್ದರು. ಕೇಜ್ರಿವಾಲ್ ಅವರನ್ನು ಬಂಧಿಸುವ ಸಲುವಾಗಿ ಜಾರಿ ನಿರ್ದೇಶನಾಲಯವು ಮತ್ತೆ ಮತ್ತೆ ನೋಟಿಸ್ ನೀಡುತ್ತಿದೆ. ಅವರು ವಿಚಾರಣೆಗೆ ಹಾಜರಾಗುವುದಿಲ್ಲ. ತನಿಖಾ ಸಂಸ್ಥೆಯ ನೋಟಿಸ್ಗಳು ‘ಕಾನೂನುಬಾಹಿರ’ವಾಗಿವೆ ಎಂದು ಎಎಪಿ ದೂರಿದೆ.