ನವದೆಹಲಿ: ಮಂಗಳವಾರ ಮಂಡನೆಯಾಗಬೇಕಾಗಿದ್ದ 2023- 24ರ ದಿಲ್ಲಿ ಸರಕಾರದ ಬಜೆಟ್’ಗೆ ಕೇಂದ್ರ ಸರ್ಕಾರ ತಡೆ ನೀಡಿರುವುದು ಈಗ ವಿವಾದವಾಗಿದೆ. ಕೇಜ್ರೀವಾಲ್ ಹಂಚಿದ ಬೇರೆ ಬೇರೆ ಹುದ್ದೆಗಳಿಗೆ ಶುಲ್ಕದ ಆಪಾದನೆಯನ್ನು ಕೇಂದ್ರ ಸರಕಾರ ಮಾಡಿದೆ.
ಬಜೆಟ್ ಮಂಡನೆಗೂ ಹಿಂದಿನ ರಾತ್ರಿ ಮಾತನಾಡಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರು, ಕೇಂದ್ರ ಸರಕಾರವು ಗೂಂಡಾಗಿರಿಯ ಆಶ್ರಯ ತಾಣವಾಗಿದೆ. ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಮಂಡನೆಯಾಗಬೇಕಾಗಿದ್ದ ರಾಜ್ಯವೊಂದರ ಬಜೆಟ್’ಗೆ ತಡೆ ನೀಡಲಾಗಿದೆ. ಕೇಜ್ರೀವಾಲರ ಭಾಷಣದ ವೀಡಿಯೋ ಕ್ಲಿಪ್ಪಿಂಗನ್ನು ಎಎಪಿ- ಆಮ್ ಆದ್ಮಿ ಪಕ್ಷದವರು ಟ್ವೀಟ್ ಮಾಡಿದ್ದಾರೆ.
ಕೇಂದ್ರದ ಗೃಹ ಇಲಾಖಾ ಸಚಿವಾಲಯವು ಇಂದು ಮಂಡನೆಯಾಗಬೇಕಾಗಿದ್ದ ದಿಲ್ಲಿ ಸರಕಾರದ ಬಜೆಟ್ಟಿಗೆ ನಿನ್ನೆಯೇ ತಡೆ ವಿಧಿಸಿದೆ ಎಂದು ಕೆಲವು ಮೂಲಗಳು ಹೇಳಿವೆ.
ಮುಖ್ಯಮಂತ್ರಿಗಳ ಕೇಂದ್ರವನ್ನು ಮಾತಲ್ಲಿ ಜಾಡಿಸಿದ ಮೇಲೆ ಗೃಹ ಸಚಿವಾಲಯವು ಅದಕ್ಕೆ ಬೇರೆ ರೀತಿ ಉತ್ತರಿಸಿದೆ. ಬಜೆಟ್ಟಿನಲ್ಲಿ ಸಂರಚನೆ ಮತ್ತು ಅಭಿವೃದ್ಧಿಗಳನ್ನೂ ಮೀರಿಸುವಂತೆ ಜಾಹೀರಾತುಗಳಿಗೆ ಹಣ ಒದಗಿಸಿರುವುದಕ್ಕೆ ಗೃಹ ಸಚಿವಾಲಯವು ದಿಲ್ಲಿ ಸರಕಾರದಿಂದ ವಿವರಣೆ ಬಯಸಿದೆ ಎಂದು ಕೇಂದ್ರ ಗೃಹ ಸಚಿವಾಲಯದವರು ಹೇಳಿದ್ದಾರೆ.