Home ಟಾಪ್ ಸುದ್ದಿಗಳು ದೆಹಲಿ | ಪ್ರೇಯಸಿಯ ದೇಹವನ್ನು 35 ಭಾಗಗಳಾಗಿ ಕತ್ತರಿಸಿ ಕೊಲೆ ಮಾಡಿದ ಕೃತ್ಯಕ್ಕೆ ಅಮೆರಿಕದ ಕ್ರೈಂ...

ದೆಹಲಿ | ಪ್ರೇಯಸಿಯ ದೇಹವನ್ನು 35 ಭಾಗಗಳಾಗಿ ಕತ್ತರಿಸಿ ಕೊಲೆ ಮಾಡಿದ ಕೃತ್ಯಕ್ಕೆ ಅಮೆರಿಕದ ಕ್ರೈಂ ಶೋ ಪ್ರೇರಣೆ

ದೆಹಲಿ: ಪ್ರೇಯಸಿಯ ದೇಹವನ್ನು 35 ಭಾಗಗಳಾಗಿ ಕತ್ತರಿಸಿ, ಹಲವು ದಿನಗಳ ಕಾಲ ರೆಫ್ರಿಜರೇಟರ್ ನಲ್ಲಿ ಇಟ್ಟು, ಸಿಕ್ಕ ಸಿಕ್ಕ ಪ್ರದೇಶಗಳಲ್ಲಿ ತುಂಡುಗಳನ್ನು ಎಸೆದಿರುವ ಬೆಚ್ಚಿ ಬೀಳಿಸುವ ಕೃತ್ಯವೊಂದಕ್ಕೆ ಒಂದು ಕ್ರೈಂ ಶೋ ಪ್ರೇರಣೆ ಎಂದು ವರದಿಯಾಗಿದೆ.

ಅಮೆರಿಕದ ‘ಡೆಕ್ಸ್ಟರ್’ ಎಂಬ ಕ್ರೈಂ ಶೋ ಪ್ರೇರಣೆಯಿಂದ ಈ ಬಗೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.

ಶೃದ್ಧಾ ವಾಲ್ಕರ್ ಎನ್ನುವ ಪ್ರೇಯಸಿಯನ್ನು ಪ್ರಿಯಕರ ಅಫ್ತಾನ್ ಅಮೀನ್ ಎಂಬಾತ ಕೊಲೆ ಮಾಡಿದ್ದ. ಕೃತ್ಯ ನಡೆದ ಆರು ತಿಂಗಳ ಬಳಿಕ ಈ ಬೀಭತ್ಸ ಸಂಗತಿ ಬೆಳಕಿಗೆ ಬಂದಿದೆ.

ಯಾರಿಗೂ ತಾನು ಕತ್ತು ಹಿಸುಕಿ ಮಾಡಿದ ಕೊಲೆಯ ಬಗ್ಗೆ ಸಂಶಯ ಬರದಿರಲು ಈ ರೀತಿ ಮಾಡಿದ್ದಾನೆ. ಈ ಕೃತ್ಯಗಳಿಗೆ ಅಮೆರಿಕನ್ ಶೋ ಪ್ರೇರಣೆ ಎನ್ನಲಾಗಿದೆ.

Join Whatsapp
Exit mobile version