Home ಟಾಪ್ ಸುದ್ದಿಗಳು ದೆಹಲಿ ವಾಯು ಮಾಲಿನ್ಯ: ಪಂಜಾಬ್’ಗೆ ಸುಪ್ರೀಂ ತರಾಟೆ

ದೆಹಲಿ ವಾಯು ಮಾಲಿನ್ಯ: ಪಂಜಾಬ್’ಗೆ ಸುಪ್ರೀಂ ತರಾಟೆ

ನವದೆಹಲಿ: ದೆಹಲಿಯಲ್ಲಿ ಮಾಲಿನ್ಯದ ಮಟ್ಟ ನಿರಂತರವಾಗಿ ಹೆಚ್ಚುತ್ತಿದೆ. ಈ ಸಂಬಂಧ ಇಂದು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಪಂಜಾಬ್ ಸರ್ಕಾರವನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು. ನೀವು ಹೇಗೆ ಮಾಡುತ್ತೀರಿ ಎಂಬುದು ನನಗೆ ತಿಳಿದಿಲ್ಲ, ಆದರೆ ಹುಲ್ಲು ಸುಡುವಿಕೆಯನ್ನು ಕಡಿಮೆ ಮಾಡಲೇಬೇಕು ಅದು ನಿಮ್ಮ ಕೆಲಸ, ಈ ಸಮಸ್ಯೆಗೆ ನೀವೇ ಪರಿಹಾರ ಕಂಡುಹಿಡಿಯಬೇಕು ಎಂದು ಕೋರ್ಟ್ ಹೇಳಿದೆ.


ದಿಲ್ಲಿಯ ವಾಯು ಮಾಲಿನ್ಯವು ರಾಜಕೀಯ ಯುದ್ಧವಾಗಲು ಸಾಧ್ಯವಿಲ್ಲ, ಈ ವಾಯು ಗುಣಮಟ್ಟದ ಕುಸಿತವು “ಜನರ ಆರೋಗ್ಯದ ಹತ್ಯೆ” ಎಂದು ಹೇಳಿದೆ.


ನೆರೆಯ ಪಂಜಾಬ್ ಮತ್ತು ಹರ್ಯಾಣಾದಲ್ಲಿ ಕೃಷಿ ತ್ಯಾಜ್ಯವನ್ನು ಸುಡುವುದೇ ಪ್ರತಿ ಚಳಿಗಾಲದಲ್ಲಿ ದಿಲ್ಲಿಯ ವಾಯು ಮಾಲಿನ್ಯಕ್ಕೆ ಕಾರಣ ಎಂದು ಹೇಳಿದ ನ್ಯಾಯಾಲಯ, ಈ ಕೃಷಿ ತ್ಯಾಜ್ಯ ಸುಡುವುದನ್ನು ನಿಲ್ಲಿಸಲು ಕ್ರಮಕೈಗೊಳ್ಳುವಂತೆ ಪಂಜಾಬ್ ಸರ್ಕಾರಕ್ಕೆ ಸೂಚಿಸಿದೆ.

ಹಬ್ಬ ಹರಿದಿನಗಳಲ್ಲಿ ಪಟಾಕಿ ಸಿಡಿಸುವ ವಿಚಾರದಲ್ಲಿ ಹಿಂದಿನ ಆದೇಶವನ್ನು ಪಾಲಿಸುವಂತೆ ರಾಜಸ್ಥಾನ ಹಾಗೂ ಇತರೆ ರಾಜ್ಯಗಳಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ವಿಶೇಷವಾಗಿ ಹಬ್ಬ ಹರಿದಿನಗಳಲ್ಲಿ ವಾಯು ಮಾಲಿನ್ಯವನ್ನು ತಗ್ಗಿಸಲು ಕ್ರಮ ಕೈಗೊಳ್ಳುವಂತೆ ರಾಜಸ್ಥಾನ ಸರ್ಕಾರಕ್ಕೆ ಸೂಚನೆ ನೀಡಿದೆ.


ಪಂಜಾಬ್ನ 2060 ಕಡೆಗಳಲ್ಲಿ ಹುಲ್ಲು ಸುಡುವ ಪ್ರಕರಣಗಳು ವರದಿಯಾಗಿದೆ, ಇದುವರೆಗೆ 19,463 ಹುಲ್ಲು ಸುಡುವ ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಪಂಜಾಬ್ನ ಹಲವು ನಗರಗಳ ವಾಯು ಗುಣಮಟ್ಟ ಸೂಚ್ಯಂಕ ಈಗ ಕಳಪೆ ವರ್ಗವನ್ನು ತಲುಪಿದೆ.

Join Whatsapp
Exit mobile version