Home ಟಾಪ್ ಸುದ್ದಿಗಳು ದೆಹಲಿ: ಮಹಿಳೆಯರ ಬಳಿಕ ಕಾರ್ಮಿಕರಿಗೂ ಉಚಿತ ಬಸ್ ಪ್ರಯಾಣ

ದೆಹಲಿ: ಮಹಿಳೆಯರ ಬಳಿಕ ಕಾರ್ಮಿಕರಿಗೂ ಉಚಿತ ಬಸ್ ಪ್ರಯಾಣ

ನವದೆಹಲಿ: ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣದ ಯೋಜನೆ ರೂಪಿಸಿದ್ದ ದೆಹಲಿಯ ಆಪ್ ಸರ್ಕಾರ ಇದೀಗ, ನೋಂದಾಯಿತ ಕಾರ್ಮಿಕರಿಗೂ ಈ ಸೌಲಭ್ಯವನ್ನು ವಿಸ್ತರಿಸಿದೆ.

ದೆಹಲಿ ಸರ್ಕಾರ ಬುಧವಾರದಿಂದ ಈ ಯೋಜನೆಯನ್ನು ಆರಂಭಿಸಿದ್ದು, ಕಾರ್ಮಿಕರು ಡಿಟಿಸಿ ಮತ್ತು ಕ್ಲಸ್ಟರ್ ಬಸ್ ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಪಡೆಯಲಿದ್ದಾರೆ. ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಇಂದು ಯೋಜನೆಗೆ ಚಾಲನೆ ನೀಡಿದರು. ಇದೇ ವೇಳೆ ಯೋಜನೆಯ ಫಲಾನುಭವಿಗಳಿಗೆ ಉಚಿತ ಬಸ್ ಪಾಸ್ ವಿತರಿಸಿದರು.

Join Whatsapp
Exit mobile version