Home ಟಾಪ್ ಸುದ್ದಿಗಳು ದೆಹಲಿ | ನಿಷೇಧದ ನಡುವೆಯೂ ಪಟಾಕಿ ಮಾರಾಟ ಮತ್ತು ಸರಬರಾಜು: 281 ಜನರ ಬಂಧನ

ದೆಹಲಿ | ನಿಷೇಧದ ನಡುವೆಯೂ ಪಟಾಕಿ ಮಾರಾಟ ಮತ್ತು ಸರಬರಾಜು: 281 ಜನರ ಬಂಧನ

ಹೊಸದಿಲ್ಲಿ: ದೆಹಲಿಯಲ್ಲಿ ನಿಷೇಧದ ನಡುವೆಯೂ ಭಾರಿ ಪ್ರಮಾಣದಲ್ಲಿ ಪಟಾಕಿಗಳನ್ನು ಸಿಡಿಸಲಾಗಿದ್ದು,ಈ ಸಂಬಂಧ ಪೊಲೀಸರು 281 ಜನರನ್ನು ಬಂಧಿಸಿದ್ದಾರೆ.


ಪೊಲೀಸರು ಒದಗಿಸಿದ ಮಾಹಿತಿಯ ಪ್ರಕಾರ,138 ಜನರನ್ನು ಪಟಾಕಿಗಳನ್ನು ಮಾರಾಟ ಮತ್ತು ಸರಬರಾಜು ಮಾಡಿದ್ದಕ್ಕಾಗಿ ಮತ್ತು 143 ಜನರನ್ನು ಸಿಡಿಸಿದ್ದಕ್ಕಾಗಿ ಬಂಧಿಸಲಾಗಿದೆ.


ಸೆಪ್ಟೆಂಬರ್ 29 ರಿಂದ ಗುರುವಾರ ದೀಪಾವಳಿಯ ನಡುವೆ ಪಟಾಕಿ ಸಿಡಿಸಿದವರ ವಿರುದ್ಧ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.
ದೆಹಲಿಯಲ್ಲಿಒಟ್ಟು 19,702.489 ಕೆಜಿ ತೂಕದ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

Join Whatsapp
Exit mobile version