ಜೂನ್ 1ರಿಂದ ಗ್ಯಾರಂಟಿ ಯೋಜನೆ ಜಾರಿಯಾಗದಿದ್ದರೆ ನ್ಯಾಯಾಲಯದಲ್ಲಿ ದಾವೆ ಹೂಡಲು ಮುಂದಾದ ವಕೀಲ

Prasthutha|

ಬಳ್ಳಾರಿ: ಜೂನ್ 1ರಿಂದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಜಾರಿಯಾಗದಿದ್ದರೆ ನ್ಯಾಯವಾದಿಯೊಬ್ಬರು ನ್ಯಾಯಾಲಯದಲ್ಲಿ ದಾವೆ ಹೂಡಲು ಸಜ್ಜಾಗಿದ್ದಾರೆ.

- Advertisement -

ಬಳ್ಳಾರಿಯ ಹಿರಿಯ ನ್ಯಾಯವಾದಿ ಹೆಚ್ ಚಂದ್ರಶೇಖರ ರೆಡ್ಡಿ ಎನ್ನುವವರು ಸರ್ಕಾರದ ವಿರುದ್ದ ಕೇಸ್​ ದಾಖಲಿಸಲು ಮುಂದಾಗಿದ್ದು, ಕೈ ನಾಯಕರು ಮತದಾರರಿಗೆ ನೀಡಿದ ಭರವಸೆಯಂತೆ ಗ್ಯಾರಂಟಿ ಯೋಜನೆ ಜಾರಿ ಮಾಡಬೇಕು. ಇಲ್ಲದಿದ್ದರೆ ಕೇಸ್ ಹಾಕುವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಜೂನ್ 1ರಿಂದ ಬಸ್ ಟಿಕೆಟ್, ಉಚಿತ ವಿದ್ಯುತ್ ಎಂದು ಕೈ ನಾಯಕರು ಚುನಾವಣೆ ವೇಳೆ ಭರವಸೆ ನೀಡಿದ್ದರು. ಆದರೆ, ಜೂನ್ ಆರಂಭಕ್ಕೆ ಇನ್ನೆರಡು ದಿನಗಳು ಬಾಕಿಯಿದ್ದು, ಸರ್ಕಾರ ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ ಮತದಾರರನ್ನು ನಂಬಿಸಿ ಮತ ಪಡೆದಿರುವ ಕಾಂಗ್ರೆಸ್ ಪಕ್ಷ, ಗ್ಯಾರಂಟಿ ಕಾರ್ಡ್ ಮೇಲೆ ಸಹಿ ಹಾಕಿರುವ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿವಕುಮಾರ್ ಕೂಡಲೇ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಬೇಕು. ಇಲ್ಲದಿದ್ದರೇ ಎಲ್ಲ ತಾಲೂಕುಗಳ ನ್ಯಾಯಾಲಯದಲ್ಲೂ ಸರ್ಕಾರ, ಸಿಎಂ ಮತ್ತು ಡಿಸಿಎಂ ವಿರುದ್ದ ಕೇಸ್ ದಾಖಲಿಸುವುದಾಗಿ ನ್ಯಾಯವಾದಿ ಚಂದ್ರಶೇಖರ ರೆಡ್ಡಿ ಗುಡುಗಿದ್ದಾರೆ.