Home ಟಾಪ್ ಸುದ್ದಿಗಳು ರೈತರ ಪ್ರತಿಭಟನೆ | ದೆಹಲಿ-ನೋಯ್ಡಾ ಹೆದ್ದಾರಿ ಬಂದ್ | ಮೊದಲ ಸುತ್ತಿನ ಮಾತುಕತೆ ವಿಫಲ

ರೈತರ ಪ್ರತಿಭಟನೆ | ದೆಹಲಿ-ನೋಯ್ಡಾ ಹೆದ್ದಾರಿ ಬಂದ್ | ಮೊದಲ ಸುತ್ತಿನ ಮಾತುಕತೆ ವಿಫಲ

ನೋಯ್ಡಾ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಜೊತೆಗಿನ ಮಾತುಕತೆ ವಿಫಲವಾಗಿರುವ ಹಿನ್ನೆಲೆಯಲ್ಲಿ, ಇಂದು ಉತ್ತರ ಪ್ರದೇಶ ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪ್ರಮುಖ ದೆಹಲಿ-ನೋಯ್ಡಾ ಹೆದ್ದಾರಿ ಬಂದ್ ಆಗಿದೆ.

ಉತ್ತರ ಪ್ರದೇಶಕ್ಕೆ ಸೇರಿದ ರೈತರು ದೆಹಲಿ ಪ್ರವೇಶಿಸಿ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಲು ಉದ್ದೇಶಿಸಿದ್ದು, ಹೆದ್ದಾರಿ ಬಂದ್ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ದೆಹಲಿ-ನೋಯ್ಡಾ ಹೆದ್ದಾರಿಯಲ್ಲಿ ಚಿಲ್ಲಾ ರಸ್ತೆಯಲ್ಲಿ ಪ್ರತಿಭಟನೆ ಮುಗಿಲು ಮುಟ್ಟಿದೆ.

ಭಾರತೀಯ ಕಿಸಾನ್ ಸಂಘ ಮತ್ತು ಇತರ ರೈತ ಸಂಘಟನೆಗಳ ಕಾರ್ಯಕರ್ತರು, ರೈತರು ಮಂಗಳವಾರ ಸಂಜೆಯಿಂದಲೇ ಜಮಾಯಿಸಿದ್ದು, ಸ್ಥಳದಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ.

ದೆಹಲಿಯಲ್ಲಿ ನಿನ್ನೆ ರೈತರು ಮತ್ತು ಸರಕಾರದ ನಡುವಿನ ಮಾತುಕತೆ ವಿಫಲವಾಗಿದೆ ಎಂದು ವರದಿಯಾಗಿದ್ದು, ಇಂದು ಎರಡನೇ ಸುತ್ತಿನ ಮಾತುಕತೆ ನಡೆಯಲಿದೆ ಎಂದು ತಿಳಿದುಬಂದಿದೆ.  

Join Whatsapp
Exit mobile version