ರೈತರ ಪ್ರತಿಭಟನೆ | ದೆಹಲಿ-ನೋಯ್ಡಾ ಹೆದ್ದಾರಿ ಬಂದ್ | ಮೊದಲ ಸುತ್ತಿನ ಮಾತುಕತೆ ವಿಫಲ

Prasthutha|

ನೋಯ್ಡಾ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಜೊತೆಗಿನ ಮಾತುಕತೆ ವಿಫಲವಾಗಿರುವ ಹಿನ್ನೆಲೆಯಲ್ಲಿ, ಇಂದು ಉತ್ತರ ಪ್ರದೇಶ ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪ್ರಮುಖ ದೆಹಲಿ-ನೋಯ್ಡಾ ಹೆದ್ದಾರಿ ಬಂದ್ ಆಗಿದೆ.

- Advertisement -

ಉತ್ತರ ಪ್ರದೇಶಕ್ಕೆ ಸೇರಿದ ರೈತರು ದೆಹಲಿ ಪ್ರವೇಶಿಸಿ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಲು ಉದ್ದೇಶಿಸಿದ್ದು, ಹೆದ್ದಾರಿ ಬಂದ್ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ದೆಹಲಿ-ನೋಯ್ಡಾ ಹೆದ್ದಾರಿಯಲ್ಲಿ ಚಿಲ್ಲಾ ರಸ್ತೆಯಲ್ಲಿ ಪ್ರತಿಭಟನೆ ಮುಗಿಲು ಮುಟ್ಟಿದೆ.

ಭಾರತೀಯ ಕಿಸಾನ್ ಸಂಘ ಮತ್ತು ಇತರ ರೈತ ಸಂಘಟನೆಗಳ ಕಾರ್ಯಕರ್ತರು, ರೈತರು ಮಂಗಳವಾರ ಸಂಜೆಯಿಂದಲೇ ಜಮಾಯಿಸಿದ್ದು, ಸ್ಥಳದಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ.

- Advertisement -

ದೆಹಲಿಯಲ್ಲಿ ನಿನ್ನೆ ರೈತರು ಮತ್ತು ಸರಕಾರದ ನಡುವಿನ ಮಾತುಕತೆ ವಿಫಲವಾಗಿದೆ ಎಂದು ವರದಿಯಾಗಿದ್ದು, ಇಂದು ಎರಡನೇ ಸುತ್ತಿನ ಮಾತುಕತೆ ನಡೆಯಲಿದೆ ಎಂದು ತಿಳಿದುಬಂದಿದೆ.  

Join Whatsapp