ಅಮಿತ್ ಶಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ । ಪುದುಚೇರಿ ಮಾಜಿ ಸಿಎಂ

Prasthutha|

- Advertisement -

ಪುದುಚೇರಿ: ಕೇಂದ್ರಾಡಳಿತ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಕಳುಹಿಸಿದ 15,000 ಕೋಟಿ ಹಣವನ್ನು ಪುದುಚೇರಿಯ ಅಂದಿನ ಸಿಎಂ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದರು. ಈ ಹೇಳಿಕೆಗೆ ಆಕ್ರೋಶಗೊಂಡ ಮಾಜಿ ಮುಖ್ಯಮಂತ್ರಿ ವಿ ನಾರಾಯಣಸ್ವಾಮಿ  ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕಿದ್ದಾರೆ.

“ಪ್ರಧಾನಿ ಮೋದಿ ಪುದುಚೇರಿಗೆ ₹15,000 ಕೋಟಿ ಕಳುಹಿಸಿದ್ದಾರೆ. ನಾನು ಆ ಹಣದ ಭಾಗವನ್ನು ಗಾಂಧಿ ಕುಟುಂಬಕ್ಕೆ ನೀಡಿದ್ದೇನೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಇದು ನನ್ನ ವಿರುದ್ಧದ ಗಂಭೀರ ಆರೋಪ.  ನನ್ನ ಮತ್ತು ಗಾಂಧಿ ಕುಟುಂಬದ ಘನತೆಗೆ ದಕ್ಕೆ ತರುವ ಸುಳ್ಳು ಹೇಳಿಕೆ ನೀಡಿದ್ದಕ್ಕಾಗಿ ಅವರ ವಿರುದ್ಧ ಕ್ರಿಮಿನಲ್ ಮಾನಹಾನಿ ಮೊಕದ್ದಮೆ ಹೂಡುತ್ತೇನೆ. ಅವರು ಅದನ್ನು ಸಾಬೀತುಪಡಿಸದಿದ್ದರೆ, ಅವರು ರಾಷ್ಟ್ರ ಮತ್ತು ಪುದುಚೇರಿಯ ಜನರೊಂದಿಗೆ  ಕ್ಷಮೆಯಾಚಿಸಬೇಕು. ಅದನ್ನು ಸಾಬೀತುಪಡಿಸಲು ನಾನು ಅವರಿಗೆ ಸವಾಲು ಹಾಕುತ್ತೇನೆ” ಎಂದು ಅವರು ಹೇಳಿದ್ದಾರೆ.

- Advertisement -

ಈ ಹಿಂದೆ  ಅಗಸ್ಟ್ 11ರಂದು ‘ಯುವ ಸ್ವಾಭಿಮಾನ್ ಸಮಾವೇಶ’ದಲ್ಲಿ ಅಮಿತ್ ಶಾ, ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷದ ಮುಖಂಡ ಅಭಿಷೇಕ್ ಬ್ಯಾನರ್ಜಿ ಅವರ ಮೇಲೂ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಆ ಹಿನ್ನಲೆಯಲ್ಲಿ ಬ್ಯಾನರ್ಜಿ ಅವರ ದೂರಿನನ್ವಯ ಗೃಹಸಚಿವರ ಮೇಲೆ ಮಾನನಷ್ಟ ಮೊಕದ್ದಮೆ ಅಡಿಯಲ್ಲಿ ಸಮನ್ಸ್ ಜಾರಿಯಾಗಿತ್ತು.

Join Whatsapp