Home ಟಾಪ್ ಸುದ್ದಿಗಳು ಐಪಿಎಸ್‌ ಅಧಿಕಾರಿ ರಶ್ಮಿ ಶುಕ್ಲಾ ವಿರುದ್ಧ ಮಾನನಷ್ಟ ಮೊಕದ್ದಮೆ

ಐಪಿಎಸ್‌ ಅಧಿಕಾರಿ ರಶ್ಮಿ ಶುಕ್ಲಾ ವಿರುದ್ಧ ಮಾನನಷ್ಟ ಮೊಕದ್ದಮೆ

ಮುಂಬೈ:  ಐಪಿಎಸ್‌ ಅಧಿಕಾರಿ ಮತ್ತು ರಾಜ್ಯ ಗುಪ್ತಚರ ಇಲಾಖೆಯ ಮಾಜಿ ಮುಖ್ಯಸ್ಥೆ ರಶ್ಮಿ ಶುಕ್ಲಾ ಮತ್ತು ಇತರ ಅಧಿಕಾರಿಗಳ ವಿರುದ್ಧ ಮಹಾರಾಷ್ಟ್ರದ ಕಾಂಗ್ರೆಸ್‌ ಅಧ್ಯಕ್ಷರಾಗಿರುವ ನಾನಾ ಪಟೋಲೆ 500 ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ತಮ್ಮ ಖಾಸಗಿ ಮೊಬೈಲನ್ನು ಅಧಿಕಾರಿಗಳು ಅನಧಿಕೃತವಾಗಿ ಟ್ಯಾಪಿಂಗ್‌ ಮಾಡಿದ್ದಾರೆ ಎಂದು ಪಟೋಲೆ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಅಕ್ರಮವಾಗಿ ಫೋನಿನಿಂದ ತೆಗೆದುಕೊಂಡಿರುವ ದಾಖಲೆಗಳನ್ನು ದುರುಪಯೋಗಪಡಿಸದಂತೆ ಶಾಶ್ವತ ತಡೆಯಾಜ್ಞೆಯನ್ನೂ ಹೊರಡಿಸಬೇಕೆಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಈ ವಿಚಾರವಾಗಿ ಸಿವಿಲ್‌ ಕೋರ್ಟ್‌ ನ್ಯಾಯಾಧೀಶರಾಗಿರುವ ವಿ.ಬಿ.ಗೊರೆ ಅವರು ರಶ್ಮಿ ಶುಕ್ಲಾ ಅವರಿಗೆ ನೋಟಿಸ್‌ ಕಳುಹಿಸಿದ್ದು, ಎಪ್ರಿಲ್ 12ರೊಳಗೆ ಅದಕ್ಕೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ್ದಾರೆ.

Join Whatsapp
Exit mobile version