ದೇಶದಲ್ಲಿ ಇಳಿಮುಖದತ್ತ ಕೋವಿಡ್ ದೈನಂದಿನ ಪ್ರಕರಣ | 77 ದಿನಗಳಲ್ಲೇ ಕಡಿಮೆ ಪ್ರಕರಣ ದಾಖಲು
Prasthutha: June 15, 2021

ಹೊಸದಿಲ್ಲಿ : ದೇಶದಾದ್ಯಂತ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಗಣನೀಯ ಇಳಿಕೆ ಕಂಡುಬರುತ್ತಿದ್ದು , ಕಳೆದ 24 ಗಂಟೆಗಳಲ್ಲಿ 60,471 ಪ್ರಕರಣಗಳು ದಾಖಲಾಗಿವೆ. ಕಳೆದ 77 ದಿನಗಳಲ್ಲಿಯೇ ದೇಶದಲ್ಲಿ ಕಡಿಮೆ ಪ್ರಕರಣ ವರದಿಯಾಗಿದೆ. ಒಂದೇ ದಿನ 2,726 ಸೋಂಕಿತರು ಸಾವನ್ನಪ್ಪಿದ್ದು, 1,17,525 ಮಂದಿ ಸೋಂಕಿತರು ಕೊರೋನಾದಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇನ್ನು ದೇಶದಲ್ಲಿ ಒಟ್ಟು 2,95,70,881 ಮಂದಿಗೆ ಕೋವಿಡ್ ಸೋಂಕು ತಗುಲಿದ್ದು, 3,77,031 ಮಂದಿ ಬಲಿಯಾಗಿದ್ದಾರೆ. ಸದ್ಯ ದೇಶದಲ್ಲಿ 9,13,378 ಸಕ್ರಿಯ ಪ್ರಕರಣಗಳಿದ್ದು 2,82,80,472 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
