Home ಟಾಪ್ ಸುದ್ದಿಗಳು ಮುಸ್ಲಿಮರ ವಿರುದ್ಧ ದ್ವೇಷದ ಘೋಷಣೆ: ಮೂವರ ಜಾಮೀನು ಅರ್ಜಿ ವಜಾ

ಮುಸ್ಲಿಮರ ವಿರುದ್ಧ ದ್ವೇಷದ ಘೋಷಣೆ: ಮೂವರ ಜಾಮೀನು ಅರ್ಜಿ ವಜಾ

ನವದೆಹಲಿ: ಜಂತರ್ ಮಂತರ್ ನಲ್ಲಿ ಮುಸ್ಲಿಂ ವಿರೋಧಿ ಘೋಷಣೆ ಕೂಗಿದ ಮೂವರು ಆರೋಪಿಗಳ ಜಾಮೀನು ಅರ್ಜಿಯನ್ನು ದೆಹಲಿ ಕೋರ್ಟ್ ವಜಾ ಮಾಡಿದೆ.
ಈ ಕುರಿತ ವೀಡಿಯೋ ವೀಕ್ಷಿಸಿದ ನ್ಯಾಯಾಧೀಶರು, ಕೆಟ್ಟ ಭಾಷೆ, ದ್ವೇಷ ಭಾಷೆ ಬಳಸುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದು ಮತ್ತು ನಮ್ಮ ದೇಶದ ಪ್ರಜೆಗೆ ತಕ್ಕುದಾದುದಲ್ಲ ಎಂದು ಹೇಳಿದರು.
ಲಿಂಕ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಉದ್ಭವ್ ಕುಮಾರ್ ಅವರು, ಆಗಸ್ಟ್ 12ರಂದು ಪ್ರೀತ್ ಸಿಂಗ್, ದೀಪಕ್ ಸಿಂಗ್ ಹಿಂದು ಮತ್ತು ವಿನೋದ್ ಶರ್ಮಾ ಹಾಕಿದ್ದ ಜಾಮೀನು ಅರ್ಜಿಗಳನ್ನು ವಜಾ ಮಾಡಿದರು. ಇದೇ ಕೇಸಿನಲ್ಲಿ ಆಗಸ್ಟ್ 11ರಂದು ಕೋರ್ಟು ಬಿಜೆಪಿ ವಕ್ತಾರ ಮತ್ತು ಸುಪ್ರೀಂ ಕೋರ್ಟ್ ಲಾಯರ್ ಅಶ್ವಿನಿ ಉಪಾಧ್ಯಾಯರಿಗೆ ಜಾಮೀನು ನೀಡಿತ್ತು.
ಆ ಕಾರ್ಯಕ್ರಮದ ರೂವಾರಿ ಮತ್ತು ಭಾಷಣಕಾರ ಉಪಾಧ್ಯಾಯ ಎಂದು ಪೊಲೀಸರು ಆರೋಪಿಸಿದ್ದಾರೆ. ಈ ಮೊಕದ್ದಮೆಯ ಎಫ್ ಐಆರ್ ನಲ್ಲಿ ತಪ್ಪು ಏನು ಎಂಬುದನ್ನು ವಿವರಿಸಿಲ್ಲ. ಆದರೆ ಇದು ಎರಡು ವಿಭಿನ್ನ ಗುಂಪುಗಳ ನಡುವೆ ವೈರ ಹುಟ್ಟು ಹಾಕುವ ಪ್ರಯತ್ನವಾದುದರಿಂದ ಅದಕ್ಕಿರುವ 153ಎ ಸೆಕ್ಷನ್ ನಂತೆ ವಿಚಾರಣೆ ಆಗಬೇಕು. ಆದರೆ ವೀಡಿಯೋ ಕ್ಲಿಪ್ಪಿಂಗ್ ಮುಕ್ತ ವಾತಾವರಣದಲ್ಲಿ ನೋಡಿದ ಕೋರ್ಟು, ಪ್ರೀತ್ ಸಿಂಗ್ ಮತ್ತು ದೀಪಕ್ ಸಿಂಗ್ ವಿರುದ್ಧ ಇದರಲ್ಲಿ ಸೂಕ್ತ ಸಾಕ್ಷ್ಯ ಇಲ್ಲ ಎಂದೂ ಹೇಳಿತು.
ಒಂದು ಕ್ಲಿಪ್ಪಿಂಗ್ ನಲ್ಲಿ ಆರೋಪಿಗಳು ಕೆಟ್ಟ ಭಾಷೆಯಲ್ಲಿ ಇನ್ನೊಂದು ವರ್ಗವನ್ನು ನಿಂದಿಸಿರುವುದು ಸ್ಪಷ್ಟವಿದೆ ಎಂದೂ ಕೋರ್ಟು ಹೇಳಿದೆ. ಎಲ್ಲರಿಗೂ ಅಭಿಪ್ರಾಯ ವ್ಯಕ್ತ ಪಡಿಸುವ ಹಕ್ಕು ಸಾಕಷ್ಟು ಮುಕ್ತವಾಗಿಯೇ ಇದೆ. ಆದರೆ ಅದು ಪ್ರಜಾಸತ್ತಾತ್ಮಕತೆ ಮೀರಿದ ಅಭಿಪ್ರಾಯ ಆಗಿರಬಾರದು ಎಂದೂ ಕೋರ್ಟು ಹೇಳಿತು.
ಭಾರತೀಯ ದಂಡ ಸಂಹಿತೆಯ 153ಎ ಧಾರ್ಮಿಕ ಮತ್ತು ಜಾತಿ ಸಾಮರಸ್ಯಕ್ಕೆ ಒತ್ತು ನೀಡಿದೆ. ಆದ್ದರಿಂದ ವಾಕ್ ಸ್ವಾತಂತ್ರ್ಯವನ್ನು ಸೌಹಾರ್ದತೆ ಹಾಳು ಮಾಡಲು ಬಳಸುವಂತಿಲ್ಲ. ಅದು ಜಾತ್ಯತೀತತೆಯ ಹೆಗ್ಗುರುತು ಆಗಿರಬೇಕು ಎಂದು ಕೋರ್ಟು ತಿಳಿಸಿತು.

Join Whatsapp
Exit mobile version