Home ಟಾಪ್ ಸುದ್ದಿಗಳು ಮಣಿಪುರ ಗಲಭೆಯಲ್ಲಿ ಸಾವಿನ ಸಂಖ್ಯೆ 54ಕ್ಕೆ ಏರಿಕೆ

ಮಣಿಪುರ ಗಲಭೆಯಲ್ಲಿ ಸಾವಿನ ಸಂಖ್ಯೆ 54ಕ್ಕೆ ಏರಿಕೆ

ಇಂಪಾಲ: ಮಣಿಪುರದಲ್ಲಿ ಹಿಂಸಾಚಾರದ ಪರಿಣಾಮ ಸಾವಿನ ಸಂಖ್ಯೆ 54ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಇಲ್ಲಿನ ಬಹುತೇಕ ಅಂಗಡಿಗಳು, ಮಾಲ್ ಗಳು , ಮಾರುಕಟ್ಟೆಗಳು ತೆರೆದಿವೆ. ಆದರೆ ಜನ ಸಂಚಾರ ವಿರಳವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಮೈತೇಯಿ ಸಮುದಾಯದವರು ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಎಂದು ಹೋರಾಟ ಮಾಡುತ್ತಿರುವುದು ಹಾಗೂ ಬುಡಕಟ್ಟು ಸಮುದಾಯಗಳನ್ನು ಅರಣ್ಯ ಪ್ರದೇಶಗಳಿಂದ ತೆರವು ಮಾಡಲು ಸರ್ಕಾರ ಈಚೆಗೆ ತೆಗೆದುಕೊಂಡಿರುವ ಕ್ರಮಗಳು ಈ ಸಂಘರ್ಷಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

Join Whatsapp
Exit mobile version