Home ಟಾಪ್ ಸುದ್ದಿಗಳು ಹಕ್ಕಿಯನ್ನು ಕಾಪಾಡಲು ಹೋದ ಇಬ್ಬರ ದಾರುಣ ಸಾವು !

ಹಕ್ಕಿಯನ್ನು ಕಾಪಾಡಲು ಹೋದ ಇಬ್ಬರ ದಾರುಣ ಸಾವು !

ಮುಂಬೈ: ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಹಕ್ಕಿಯನ್ನು ಕಾಪಾಡುವಾಗ ಟ್ಯಾಕ್ಸಿಯೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಬಾಂದ್ರಾ-ವರ್ಲಿ ಸೀ ಲಿಂಕ್ ರಸ್ತೆಯಲ್ಲಿ ಗಾಯಗೊಂಡ ಪಕ್ಷಿಯನ್ನು ರಕ್ಷಿಸಲು ಉದ್ಯಮಿ ಮತ್ತು ಅವರ ಚಾಲಕ ಕಾರಿನಿಂದ ಇಳಿದು ಪಕ್ಷಿಯನ್ನು ಎತ್ತಿಕೊಂಡು ಕಾರಿನತ್ತ ಬರುತ್ತಿದ್ದರು. ಆಗ ಹಿಂದಿನಿಂದ ವೇಗವಾಗಿ ಬಂದ ಟ್ಯಾಕ್ಸಿ ಡಿಕ್ಕಿ ಹೊಡೆದಿದೆ.
ಈ ಅಪಘಾತದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸಿಸಿ ಟಿವಿ ದೃಶ್ಯದಲ್ಲಿ ಹಕ್ಕಿಯನ್ನು ಕಾಪಾಡಲು ರಸ್ತೆ ಮಧ್ಯದಲ್ಲೇ ಕಾರು ನಿಲ್ಲಿಸಿ ಇಳಿದ ಅಮರ್ ಮನೀಶ್ ಜರಿವಾಲಾ ಎಂಬ ಉದ್ಯಮಿ ಪಕ್ಷಿಯನ್ನು ಎತ್ತಿಕೊಂಡು ಕಾರಿನತ್ತ ಬರುತ್ತಿದ್ದರು. ಅವರಿಗೆ ಸಹಾಯ ಮಾಡಲು ಅವರ ಕಾರಿನ ಚಾಲಕ ಸುಂದರ್ ಕಾಮತ್ ಕೂಡ ಕೆಳಗೆ ಇಳಿದಿದ್ದರು. ಈ ವೇಳೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಟ್ಯಾಕ್ಸಿ ಜರಿವಾಲಾ ಮತ್ತು ಅವರ ಡ್ರೈವರ್ ಶ್ಯಾಮ್ ಸುಂದರ್ ಕಾಮತ್ ಗೆ ಡಿಕ್ಕಿ ಹೊಡೆದಿದೆ.
ಕಾರು ಗುದ್ದಿದ ರಭಸಕ್ಕೆ ಇಬ್ಬರೂ ಹಾರಿ ಬಿದ್ದಿದ್ದಾರೆ. ಬೇರೆ ವಾಹನದವರು ಅವರಿಬ್ಬರನ್ನೂ ಆಸ್ಪತ್ರೆಗೆ ಸೇರಿಸಿದ್ದು, ಜರಿವಾಲಾ ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವಾಗಲೇ ಡ್ರೈವರ್ ಕಾಮತ್ ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

https://twitter.com/singhvarun/status/1535133599120232448?ref_src=twsrc%5Etfw%7Ctwcamp%5Etweetembed%7Ctwterm%5E1535133599120232448%7Ctwgr%5E%7Ctwcon%5Es1_c10&ref_url=https%3A%2F%2Ftv9kannada.com%2Fnational%2Fviral-video-on-camera-2-men-stop-on-mumbai-sea-link-to-save-bird-run-over-by-taxi-sct-au49-397148.html
Join Whatsapp
Exit mobile version