ಉತ್ತರಪ್ರದೇಶದ ಗೋಶಾಲೆಯಲ್ಲಿ ಹಸಿವಿನಿಂದ ಗೋವುಗಳ ಸಾವು

Prasthutha: March 27, 2021

ಹೊಸದಿಲ್ಲಿ : ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿರುವ ಗೋಶಾಲೆಯಲ್ಲಿ ಗೋವುಗಳು ಹಸಿವಿನಿಂದ ಸಾಯುವ ವಿಡಿಯೋ ವೈರಲ್ ಆಗಿದೆ.

ಗೋವುಗಳ ಹೆಸರಿನಲ್ಲಿ ಜನರನ್ನು ಹೊಡೆದು ಸಾಯಿಸುವ ಯೋಗಿಯ ರಾಜ್ಯದಲ್ಲಿ ಸಾಕಷ್ಟು ಆಹಾರಗಳು ಸಿಗದೆ ಗೋವುಗಳು ಸಾಯುತ್ತಿವೆ ಎಂದು ಸಾರ್ವಜನಿಕರಿಂದ ಕೇಳಿ ಬರುತ್ತಿರುವ ಆರೋಪ.  ಉತ್ತರಪ್ರದೇಶದ ಸಾಮಾಜಿಕ ಕಾರ್ಯಕರ್ತರು ಹಸುಗಳು ಸಾಯುತ್ತಿರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಪ್ರತಿದಿನ ಹನ್ನೆರಡಕ್ಕಿಂತಲೂ ಹೆಚ್ಚು ಹಸುಗಳು ಹಸಿವಿನಿಂದ ಸಾವನ್ನಪ್ಪುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ನೂರಾರು ಹಸುಗಳು ಹಸಿವಿನಿಂದಾಗಿ ಅಸ್ಥಿಪಂಜರದಂತೆ ಕಾಣುತ್ತಿದೆ ಎಂದು ಆರೋಪಿಸಲಾಗಿದೆ. ಗ್ರೇಟರ್ ನೋಯ್ಡಾದ ಜಲ್ಪುರಾ ಗೋ ಶಾಲೆಯಲ್ಲಿ ಸಾಕಷ್ಟು ಆಹಾರವಿಲ್ಲದೆ ಸುಮಾರು 2,000 ಹಸುಗಳು ಹಸಿವಿನಿಂದ ಬಳಲುತ್ತಿದೆ. ಗೋಶಾಲೆಯಲ್ಲಿ ಆಹಾರಗಳಿಲ್ಲದೆ ಗೋವುಗಳು ಅಲೆದಾಡುತ್ತಿದೆ ಎಂದು ಗೋಶಾಲೆಗೆ ಭೇಟಿ ನೀಡಿದ ‘ದಿ ಪ್ರಿಂಟ್’ ನ್ಯೂಸ್ ಪೋರ್ಟಲ್ ವರದಿ ಮಾಡಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!