Home ಟಾಪ್ ಸುದ್ದಿಗಳು ಆಫ್ರಿಕನ್ ಪ್ರಜೆಯ ಕಸ್ಟಡಿ ಸಾವು| ತನಿಖೆ ಆರಂಭಿಸಿದ CID

ಆಫ್ರಿಕನ್ ಪ್ರಜೆಯ ಕಸ್ಟಡಿ ಸಾವು| ತನಿಖೆ ಆರಂಭಿಸಿದ CID

ಬೆಂಗಳೂರು: ಆಫ್ರಿಕನ್ ಪ್ರಜೆಯ ಕಸ್ಟಡಿ ಸಾವಿನ ಬಗ್ಗೆ CID ತನಿಖೆಯನ್ನು ಆರಂಭಿಸಿದೆ.  

ಜೋಯಲ್ ಶಿಂಡಾನಿ ಮಾಲು(27) ಎಂಬ ಆಫ್ರಿಕನ್ ಪ್ರಜೆಯನ್ನು ಮಾದಕ ದ್ರವ್ಯ ಸಾಗಾಟದ ಆರೊಪದಲ್ಲಿ ಬಂಧಿಸಲಾಗಿತ್ತು. ತೀವ್ರ ಎದೆನೋವಿನಿಂದ ಬಳಲುತ್ತಿದ್ದ ಆರೋಪಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ ಹೃದಯಾಘಾತದಿಂದ ಸಾವನ್ನಪ್ಪಿದ್ದನು.

ಈ ಹಿನ್ನೆಲೆಯಲ್ಲಿ ನಗರದ ಆಫ್ರಿಕನ್ ನಿವಾಸಿಗಳ ಗುಂಪು ಜೆಸಿ ನಗರ ಪೊಲೀಸ್ ಠಾಣೆಗೆ ಆಗಮಿಸಿ ಪ್ರತಿಭಟನೆ ನಡೆಸಿ ಅದು ಹಿಂಸಾ ರೂಪಕ್ಕೆ ತಿರುಗಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು.  ತನಿಖೆ ನಡೆಸುತ್ತಿರುವ CID ತಂಡವು ಆಸ್ಪತ್ರೆಗೆ ಭೇಟಿ ನೀಡಿ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸ್ ಅಧಿಕಾರಿಗಳನ್ನು ಕೂಡ ವಿಚಾರಿಸಿದ್ದು, ಪೊಲೀಸ್ ಠಾಣೆ ಮತ್ತು ಆಸ್ಪತ್ರೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಿದೆ.

Join Whatsapp
Exit mobile version