ಕುವೈತ್ ಅಮೀರ್ ನಿಧನ: ಕೇಂದ್ರ ಸರ್ಕಾರದಿಂದ ಇಂದು ಶೋಕಾಚರಣೆ ಘೋಷಣೆ

Prasthutha|

ನವದೆಹಲಿ: ನಿನ್ನೆ ನಿಧನರಾದ ಕುವೈತ್ ಅಮೀರ್ ಶೇಖ್ ನವಾಫ್ ಅಲ್ ಅಹ್ಮದ್ ಅಲ್ ಸಬಾಹ್ ಅವರಿಗೆ ಗೌರವ ಸೂಚಕವಾಗಿ ಕೇಂದ್ರ ಸರ್ಕಾರ ಇಂದು ದೇಶಾದ್ಯಂತ ಒಂದು ದಿನದ ಶೋಕಾಚರಣೆಯನ್ನು ಘೋಷಿಸಿದೆ.

- Advertisement -

ಕುವೈತ್‌ನ ಅಮೀರ್ ಶೇಖ್ ನವಾಫ್ ಅಲ್ ಅಹ್ಮದ್ ಅಲ್ ಸಬಾಹ್ ಡಿಸೆಂಬರ್ 16, 2023 ರಂದು ನಿಧನರಾದರು. ಅಗಲಿದ ಗಣ್ಯರಿಗೆ ಗೌರವದ ಸಂಕೇತವಾಗಿ, ಭಾರತ ಸರ್ಕಾರವು 2023 ರ ಡಿಸೆಂಬರ್ 17 ರಂದು ಭಾರತದಾದ್ಯಂತ ಒಂದು ದಿನದ ರಾಜ್ಯ ಶೋಕಾಚರಣೆ ನಡೆಸಲು ನಿರ್ಧರಿಸಿದೆ ಎಂದು ಗೃಹ ಸಚಿವಾಲಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಶೇಖ್ ನವಾಫ್ ಅಲ್ ಅಹ್ಮದ್ ಅಲ್ ಸಬಾಹ್ ನಿನ್ನೆ ತಮ್ಮ 86ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

- Advertisement -

1937 ರಲ್ಲಿ ಜನಿಸಿದ ಶೇಖ್ ನವಾಫ್ ತಮ್ಮ 25 ನೇ ವಯಸ್ಸಿನಲ್ಲಿ ಹವಾಲಿ ಪ್ರಾಂತ್ಯದ ಗವರ್ನರ್ ಆಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು.

2021ರಲ್ಲಿ, ಶೇಖ್ ನವಾಫ್ ಅವರು ಕ್ಷಮಾದಾನ ಆದೇಶವನ್ನು ಹೊರಡಿಸಿದ್ದರು. ಸುಮಾರು ಮೂರು ಡಜನ್ ಕುವೈತ್ ಭಿನ್ನಮತೀಯರ ಶಿಕ್ಷೆಯನ್ನು ಕ್ಷಮಾಪಣೆ ಮತ್ತು ಕಡಿಮೆಗೊಳಿಸಿದರು.



Join Whatsapp