ಸಿಗ್ನಲ್ ತೆರವಾದಾಗ ದಾವಂತದ ಚಾಲನೆ: ಸ್ಕೂಟರ್’ಗೆ ಟಿಪ್ಪರ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಮೃತ್ಯು

Prasthutha|

ಮಂಗಳೂರು: ವೇಗವಾಗಿ ಬರುತ್ತಿದ್ದ ಟಿಪ್ಪರ್ ಲಾರಿಯೊಂದು ಸ್ಕೂಟರ್’ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ನಗರದ ನಂತೂರು ಸಿಗ್ನಲ್’ನಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಸ್ಯಾಮ್ಯುಯೆಲ್ ಜೇಸುದಾಸ್(66) ಹಾಗೂ ಜೇಸುದಾಸ್ ಅವರ ಸೊಸೆ ಶೃತಿ ಅವರ ದೊಡ್ಡಮ್ಮನ ಮಗಳಾದ ಭೂಮಿಕಾ (17) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ನಂತೂರು ಸಿಗ್ನಲ್ ನಲ್ಲಿ ಲಾರಿ ಹಾಗೂ ಸ್ಕೂಟರ್ ಸಿಗ್ನಲ್ ಕಾರಣದಿಂದಾಗಿ ನಿಂತಿತ್ತು. ಸಿಗ್ನಲ್ ತೆರವುಗೊಂಡಾಗ ಸ್ಕೂಟರ್ ಗೆ ಡಿಕ್ಕಿಯಾಗಿ ಲಾರಿ ಮುಂದೆ ಚಲಿಸಿದೆ. ಲಾರಿಯಡಿಗೆ ಬಿದ್ದ ಸ್ಕೂಟರ್ ನಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನು ಕಣ್ಣಾರೆ ಕಂಡ ಅಲ್ಲಿದ್ದವರು ಉದ್ರಿಕ್ತಗೊಂಡು ಲಾರಿಯನ್ನು ನಿಲ್ಲಿಸಿ ಲಾರಿ ಚಾಲಕನಿಗೆ ಹೆಲ್ಮೆಟ್ ಸೇರಿದಂತೆ ಕೈಗೆ ಸಿಕ್ಕ ವಸ್ತುವಿನಿಂದ ಹಲ್ಲೆ ನಡೆಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕದ್ರಿ ಸಂಚಾರ ಠಾಣೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಲಾರಿ ಚಾಲಕ ಸತೀಸ್ ಗೌಡ ಪಾಟೀಲ್  ಎಂಬಾತನನ್ನು ಬಂಧಿಸಿದ್ದಾರೆ.

- Advertisement -