ರೈತರ ಪ್ರತಿಭಟನೆ | ಮಹಿಳೆಯರಿಂದಲೂ ಟ್ರಾಕ್ಟರ್ ಗಳಲ್ಲಿ ದೆಹಲಿಯತ್ತ ಪ್ರಯಾಣಿಸಲು ಸಿದ್ಧತೆ

Prasthutha|

ನವದೆಹಲಿ : ಕೇಂದ್ರ ಸರಕಾರದ ನೂತನ ಕೃಷಿ ನೀತಿಯನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಬೇಡಿಕೆ ಈಡೇರದಿದ್ದರೆ, ಜ.26ರಂದು ‘ಟ್ರಾಕ್ಟರ್ ಪರೇಡ್’ ನಡೆಸುವುದಾಗಿ ಕರೆ ನೀಡಿದ್ದರು. ಈ ಸಂಬಂಧ ಪ್ರತಿಭಟನಕಾರರನ್ನು ಬೆಂಬಲಿಸಲು ಹರ್ಯಾಣದ ಹಲವು ಮಹಿಳೆಯರೂ ಮುಂದಾಗಿದ್ದಾರೆ. ಇದೀಗ ಅವರು ಟ್ರಾಕ್ಟರ್ ಚಲಾಯಿಸಲು ತರಬೇತಿ ಪಡೆಯುತ್ತಿದ್ದು, ಜ.26ರಂದು ‘ಟ್ರಾಕ್ಟರ್ ಪರೇಡ್’ ಪ್ರತಿಭಟನೆ ನಡೆದರೆ, ಅದರಲ್ಲಿ ಸೇರಿಕೊಳ್ಳಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

- Advertisement -

ರಾಜ್ಯಾದ್ಯಂತ ಹಲವು ಕಡೆ ಈ ರೀತಿ ತರಬೇತಿ ನೀಡಲಾಗುತ್ತಿದೆ. ಅದರಲ್ಲಿ ಸೋಮವಾರ ಜಿಂದ್-ಪಟಿಯಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಿಂದ್ ಜಿಲ್ಲೆಯ ಖಾತ್ಕರ್ ಟೋಲ್ ಪ್ಲಾಝಾದ ಸಮೀಪ ಇಂತಹುದೊಂದು ತರಬೇತಿ ನೀಡಲಾಗಿದೆ.

ಮಹಿಳೆಯರಿಗೆ ಟ್ರಾಕ್ಟರ್ ಸ್ಟಾರ್ಟ್ ಮಾಡುವುದು ಹೇಗೆ? ಚಲಾಯಿಸುವುದು ಹೇಗೆ? ಸ್ವಿಚ್ ಆಫ್ ಮಾಡುವುದು ಹೇಗೆ? ಸ್ಟೇರಿಂಗ್ ನಿರ್ವಹಿಸುವುದು ಹೇಗೆ? ಮುಂತಾದ ವಿಚಾರಗಳನ್ನು ಮಹಿಳೆಯರಿಗೆ ಕಲಿಸಿಕೊಡಲಾಗಿದೆ.

- Advertisement -

ಜ.26ರೊಳಗೆ ತಮ್ಮ ಬೇಡಿಕೆ ಈಡೇರದಿದ್ದರೆ, ರೈತರು ಟ್ರಾಕ್ಟರ್ ಗಳಲ್ಲಿ ದೆಹಲಿಯಲ್ಲಿ ಮೆರವಣಿಗೆ ನಡೆಸಲು ಉದ್ದೇಶಿಸಿದ್ದು, ಇದನ್ನು ‘ಟ್ರಾಕ್ಟರ್ ಪರೇಡ್’ ಎನ್ನಲಾಗಿದೆ.



Join Whatsapp