ಹೊಸದಿಲ್ಲಿ: ರಾಷ್ಟ್ರೀಯ ದಳದ ( ಆರ್‌ಜೆಡಿ ) ವರಿಷ್ಠ ಲಾಲು ಪ್ರಸಾದ್ ಯಾದವ್ ಅವರಿಗೆ ತನ್ನ ಮಗಳು ಮೂತ್ರಪಿಂಡ ದಾನ ಮಾಡಲು ಮುಂದಾಗಿದ್ದಾರೆ.
ಹಲವಾರು ವರ್ಷಗಳಿಂದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ ಲಾಲು ಅವರಿಗೆ ಮಗಳು ರೋಶಿನಿ ಆಚಾರ್ಯ ಕಿಡ್ನಿ ದಾನ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಕಿಡ್ನಿ ಕಸಿ ಮಾಡಿಸಿಕೊಳ್ಳಲು ಲಾಲು ಅವರಿಗೆ ವೈದ್ಯರು ಸೂಚಿಸಿದ್ದು, ಸಿಂಗಪುರದಲ್ಲಿರುವ ಅವರ ಮಗಳು ರೋಶಿನಿ ಆಚಾರ್ಯ ತಮ್ಮ ತಂದೆಗಾಗಿ ಮೂತ್ರಪಿಂಡ ದಾನ ಮಾಡಲು ಮುಂದಾಗಿದ್ದಾರೆ ಎಂದು ಕುಟುಂದ ಆಪ್ತ ವಲಯಗಳು ತಿಳಿಸಿದೆ.
ಕಿಡ್ನಿ ದಾನ ಮಾಡಲು ಮಗಳು ಮುಂದಾದಾಗ ತಂದೆ ಲಾಲು ಆರಂಭದಲ್ಲಿ ನಿರಾಕರಿಸಿದ್ದರು, ಆದರೆ ಆಕೆಯ ಒತ್ತಡಕ್ಕೆ ಮಣಿದು ಅವರು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.