Home ಟಾಪ್ ಸುದ್ದಿಗಳು ಪಾಕ್ ಅಧ್ಯಕ್ಷರ ಪುತ್ರಿ ‘ಪ್ರಥಮ ಮಹಿಳೆ’ ಗೌರವಕ್ಕೆ ಪಾತ್ರ: ಇತಿಹಾಸದಲ್ಲೇ ಮೊದಲು

ಪಾಕ್ ಅಧ್ಯಕ್ಷರ ಪುತ್ರಿ ‘ಪ್ರಥಮ ಮಹಿಳೆ’ ಗೌರವಕ್ಕೆ ಪಾತ್ರ: ಇತಿಹಾಸದಲ್ಲೇ ಮೊದಲು

ಇಸ್ಲಮಾಬಾದ್: ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಆಲಿ ಝರ್ದಾರಿ ತನ್ನ ಪುತ್ರಿ ಅಸೀಫಾ ಭುಟ್ಟೋರನ್ನು ದೇಶದ ಪ್ರಥಮ ಮಹಿಳೆಯೆಂದು ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿ ಮಾಡಿದೆ.

ಸಾಮಾನ್ಯವಾಗಿ ಈ ಸ್ಥಾನಮಾನ ಅಧ್ಯಕ್ಷರ ಪತ್ನಿಗೆ ಸಲ್ಲುತ್ತದೆ. ಆದರೆ ಇದೇ ಮೊದಲ ಬಾರಿಗೆ ಈ ಸ್ಥಾನ ಅಧ್ಯಕ್ಷರ ಪುತ್ರಿಗೆ ಸಲ್ಲಲಿದೆ. ಝರ್ದಾರಿಯವರ ಪತ್ನಿ ಮಾಜಿ ಪ್ರಧಾನಿ ಬೆನಝೀರ್ ಭುಟ್ಟೋ 2007ರಲ್ಲಿ ಗುಂಡೇಟಿಗೆ ಪ್ರಾಣ ಕಳಕೊಂಡಿದ್ದಾರೆ. ಆದ್ದರಿಂದ ಅಧ್ಯಕ್ಷರ ಪುತ್ರಿ ಆಸಿಫಾ ಭುಟ್ಟೋಗೆ ಈ ಸ್ಥಾನಮಾನ ದೊರೆಯಲಿದೆ

ಈ ಕುರಿತ ಅಧಿಕೃತ ಘೋಷಣೆಯ ಬಳಿಕ ಆಸಿಫಾ ಭುಟ್ಟೋಗೆ ಪ್ರಥಮ ಮಹಿಳೆಗೆ ಸಲ್ಲುವ ಗೌರವ, ಶಿಷ್ಟಾಚಾರ ಮತ್ತು ಸವಲತ್ತುಗಳು ದೊರಕಲಿವೆ.

ಆದಿತ್ಯವಾರ ಪಾಕಿಸ್ತಾನ್ ಪೀಪಲ್ಸ್ ಪಕ್ಷದ ಸಹ ಅಧ್ಯಕ್ಷ ಆಸಿಫ್ ಝರ್ದಾರಿ ದೇಶದ 14ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

Join Whatsapp
Exit mobile version