‘ಮುಂಬರುವ ಇರಾನ್ ಅಧ್ಯಕ್ಷೀಯ ಚುನಾವಣೆಯನ್ನು ಬಹಿಷ್ಕರಿಸುತ್ತೇನೆ’ : ಮಾಜಿ ಅಧ್ಯಕ್ಷ ರಫ್ಸಂಜಾನಿ ಪುತ್ರಿ ಫಾಯಿಝಾ ಹಾಶೆಮಿ

Prasthutha|

ಟೆಹ್ರಾನ್ : ಇರಾನ್ ನ ಧಾರ್ಮಿಕ ಆಡಳಿತದ ನೀತಿ ನಿರೂಪಣೆಗಳ ಬಹುಮುಖ್ಯ ಭಾಗವಾಗಿದ್ದ ಇರಾನಿನ ಮಾಜಿ ಅಧ್ಯಕ್ಷ  ರಫ್ಸಂಜಾನಿಯವರ ಪುತ್ರಿ ಫಾಯಿಝಾ ಹಾಶೆಮಿ ಮುಂಬರುವ ಅಧ್ಯಕ್ಷೀಯ ಚುನಾವಣೆಗಳನ್ನು ಬಹಿಷ್ಕರಿಸಲು ಉದ್ದೇಶಿಸಿದ್ದಾರೆ. ರಾಷ್ಟ್ರದಲ್ಲಿ ನಡೆಯುವ ಯಾವುದೇ ಸುಧಾರಣೆಗಳಲ್ಲಿ ನಂಬಿಕೆಯಿಲ್ಲದಿರುವುದೇ ನನ್ನ ಈ ನಿರ್ಧಾರಕ್ಕೆ ಕಾರಣ ಎಂದವರು ತಿಳಿಸಿದ್ದಾರೆ.

- Advertisement -

ಮಹಿಳಾ ಹಕ್ಕುಗಳ ಪರ ವಕೀಲೆ ಮತ್ತು ದೇಶದ ಮಾಜಿ ಕಾನೂನು ನಿರೂಪಕರಾಗಿರುವ ಫಾಯಿಝಾ ಹಾಶಿಮಿ, “ತನ್ನ ಸ್ವಂತ ಸಹೋದರ ಟೆಹ್ರಾನ್ ನಗರ ಸಭೆಯ ಅಧ್ಯಕ್ಷ ಮತ್ತು ಸಂಭಾವ್ಯ ಅಧ್ಯಕ್ಷೀಯ ಅಭ್ಯರ್ಥಿ ಮೊಹ್ಸೆನ್ ಹಾಶೆಮಿ ರಫ್ಸಂಜಾನಿ ಸ್ಪರ್ಧಿಸಿದ್ದರೂ ಇರಾನ್ ನ ಅಧ್ಯಕ್ಷೀಯ ಚುನಾವಣೆಯಲ್ಲಿ ನಾನು ಮತ ಚಲಾಯಿಸುವುದಿಲ್ಲ ಎಂದು ಹೇಳಿದ್ದಾರೆ.  ಹಾಶೆಮಿ ಅವರ ತಂದೆ, ಇರಾನ್ ನ ಮಾಜಿ ಅಧ್ಯಕ್ಷ ಅಕ್ಬರ್ ಹಾಶೆಮಿ ರಫ್ಸಂಜಾನಿ ಇರಾನ್ ನ ಧಾರ್ಮಿಕ ಆಡಳಿತದ ಸ್ಥಾಪಕ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಇರಾನಿನ ಪರಮೋಚ್ಚ ನಾಯಕ ಅಲಿ ಖೊಮೇನಿ ಅವರನ್ನು ಅಧಿಕಾರಕ್ಕೆ ತರಲು ಶ್ರಮಿಸಿದವರಲ್ಲಿ ಅಕ್ಬರ್ ರಫ್ಸಂಜಾನಿ ಪ್ರಮುಖರಾಗಿದ್ದಾರೆ.

ಇರಾನ್ ನಲ್ಲಿನ ಸುಧಾರಣಾವಾದಿ ಚಳುವಳಿ ಅಂತ್ಯಗೊಂಡಿದ್ದು, ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಹಾಶೆಮಿ ಹೇಳಿದ್ದಾರೆ. ಸುಧಾರಣಾವಾದಿ ಆದರ್ಶಗಳಿಗೆ ಬದ್ಧವಾಗಿರುವ ಅಭ್ಯರ್ಥಿಯು ಸ್ಪರ್ಧಿಸುವುದಾದರೆ ತನ್ನ ಮನಸ್ಸನ್ನು ಬದಲಾಯಿಸಲು ಅವರು ಮುಕ್ತಳಾಗಿದ್ದೇನೆ  ಎಂದು ಅವರು ಹೇಳಿದ್ದಾರೆ. ಇರಾನ್ ನಲ್ಲಿನ ಆಡಳಿತವನ್ನು ಬಹಿರಂಗವಾಗಿ ಟೀಕಿಸುವ ಹಾಶೆಮಿ, ದೇಶ ವಿರೋಧಿ ಪ್ರಚಾರ ನಡೆಸಿದ ಕಾರಣಕ್ಕಾಗಿ 2012ರಲ್ಲಿ ಆರು ತಿಂಗಳುಗಳ ಕಾಲ ಜೈಲಿನಲ್ಲಿದ್ದರು.

- Advertisement -

ಜೂನ್ 18 ರಂದು ಇರಾನ್ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಇದೀಗಾಗಲೇ ಹಲವಾರು ಇರಾನಿನ ಹಿರಿಯ ಅಧಿಕಾರಿಗಳು ಕಡಿಮೆ ಮತದಾನ ನಡೆಯುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

Join Whatsapp