Home ಟಾಪ್ ಸುದ್ದಿಗಳು ದತ್ತಮಾಲಾ ಅಭಿಯಾನ ಹಿನ್ನೆಲೆ: ಡಿಸೆಂಬರ್ 8 ರಂದು ಕೊಟ್ಟಿಗೆಹಾರದಲ್ಲಿ ಅಂಗಡಿ ಮುಂಗಟ್ಟು ಬಂದ್

ದತ್ತಮಾಲಾ ಅಭಿಯಾನ ಹಿನ್ನೆಲೆ: ಡಿಸೆಂಬರ್ 8 ರಂದು ಕೊಟ್ಟಿಗೆಹಾರದಲ್ಲಿ ಅಂಗಡಿ ಮುಂಗಟ್ಟು ಬಂದ್

ಕೊಟ್ಟಿಗೆಹಾರ: ಚಿಕ್ಕಮಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಆಯೋಜಿಸಿರುವ  ದತ್ತಮಾಲಾ ಅಭಿಯಾನ ಹಾಗೂ ದತ್ತ ಜಯಂತಿ ಪ್ರಯುಕ್ತ ಸೂಕ್ಷ್ಮ ಪ್ರದೇಶ ವಾದ ಚಾರ್ಮಾಡಿ ಘಾಟ್ ಗಡಿ ಭಾಗದ ಕೊಟ್ಟಿಗೆಹಾರದಲ್ಲಿ ಸೂಕ್ತ ಕಾನೂನು ವ್ಯವಸ್ಥೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಸೂಕ್ತ ಬಿಗಿ ಪೊಲೀಸ್ ಬಂದೋಬಸ್ತ್  ಮಾಡಲಾಗಿದೆ’ಎಂದು ಮೂಡಿಗೆರೆ ಸರ್ಕಲ್ ಇನ್ ಸ್ಪೆಕ್ಟರ್ ಸೋಮೇಗೌಡ ಹೇಳಿದರು.

ಅವರು ಸುದ್ದಿಗಾರರೊಂದಿಗೆ ಮಾತನಾಡಿ’ ಕೊಟ್ಟಿಗೆಹಾರದಲ್ಲಿ ದಕ್ಷಿಣ ಕನ್ನಡ ಭಾಗದಿಂದ ಬರುವ ವಾಹನಗಳ ಮಾಹಿತಿ ಕಲೆ ಹಾಕಿ ತಪಾಸಣೆ ಮಾಡಿ  ಬಿಡಲಾಗುತ್ತಿದೆ. ಆಯಾ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು  ಚೆಕ್ ಪೋಸ್ಟ್ ಗಳಲ್ಲಿ ನಿಯೋಜಿಸಲಾಗಿದೆ. ವಿವಿಧ ಜಿಲ್ಲೆಯ ಪೊಲೀಸರನ್ನು ತಪಾಸಣಾ  ಕೇಂದ್ರಗಳಲ್ಲಿ ಹಗಲು ಮತ್ತು ರಾತ್ರಿ ಪಾಳಿಯಲ್ಲಿ ಒಂದು ಚೆಕ್ ಪೋಸ್ಟ್ ಗೆ 10 ಪೊಲೀಸ್ ಸಿಬ್ಬಂದಿ ಹಾಗೂ 2 ಇಬ್ಬರು ಸಬ್ ಇನ್ ಸ್ಪೆಕ್ಟರ್ ಎರಡು ಪಾಳಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದರು.

ಮುಂಜಾಗರೂಕತೆ ಕ್ರಮವಾಗಿ ಡಿಸೆಂಬರ್ 8ರಂದು ಬೆಳಿಗ್ಗೆಯಿಂದಲೇ ಕೊಟ್ಟಿಗೆಹಾರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಆದೇಶಿಸಲಾಗಿದೆ. ಕೊಟ್ಟಿಗೆಹಾರ, ಜನ್ನಾಪುರ, ಗೋಣಿಬೀಡು, ಕೊಲ್ಲಿಬೈಲ್, ಬಾಳೂರು ಹ್ಯಾಂಡ್ ಪೋಸ್ಟ್ ಗಳಲ್ಲಿ ತನಿಖಾ ಠಾಣಾ ತೆರೆದಿದ್ದೇವೆ. ಚರ್ಚ್, ಮಸೀದಿ ದಾರ್ಮಿಕ ಸ್ಥಳಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಬಣಕಲ್ ಸಬ್ ಇನ್ ಸ್ಪೆಕ್ಟರ್ ಜಂಬೂರಾಜ್ ಮಹಾಜನ್  ಉಸ್ತುವಾರಿ ವಹಿಸಿದ್ದು ಅವರೊಂದಿಗೆ ಇತರ ಜಿಲ್ಲೆಯ ಎರಡು ಸಬ್ ಇನ್ ಸ್ಪೆಕ್ಟರ್ ಕರ್ತವ್ಯದಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಚೆಕ್ ಪೋಸ್ಟ್ ನಲ್ಲಿ ರಾಯಚೂರು ಶಕ್ತಿನಗರದ ಸಬ್ ಇನ್ ಸ್ಪೆಕ್ಟರ್ ಬಸವರಾಜ್,ಎಎಸೈ ಟಿ.ಕೆ.ಶಶಿ, ಪೊಲೀಸ್ ಸಿಬ್ಬಂದಿಗಳಾದ ಕಿರಣ್, ಸಂತೋಷ್ ಮತ್ತಿತರರು ಇದ್ದರು.

Join Whatsapp
Exit mobile version