2022- 23 ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಗೆ ದಿನಾಂಕ ಹಾಗೂ ವೇಳಾಪಟ್ಟಿ ನಿಗದಿ

Prasthutha|

ಬೆಂಗಳೂರು: 2022-23 ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಗೆ ತಾತ್ಕಾಲಿಕ ವೇಳಾಪಟ್ಟಿ ನಿಗದಿಯಾಗಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ. 2023ರ ಮಾರ್ಚ್ 10 ರಿಂದ 29ರವರೆಗೆ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದೆ.

- Advertisement -

ಮಾರ್ಚ್‌ 10ರಂದು ಕನ್ನಡ, ಅರೆಬಿಕ್‌, ಮಾರ್ಚ್ 11ರಂದು ಗಣಿತ, ಶಿಕ್ಷಣಶಾಸ್ತ್ರ,ಮಾರ್ಚ್ 13ರಂದು ಅರ್ಥಶಾಸ್ತ್ರ,ಮಾರ್ಚ್ 14ರಂದು ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನ ವಿಜ್ಞಾನ, ಮೂಲಗಣಿತ,ಮಾರ್ಚ್ 15ರಂದು ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್‌,ಮಾರ್ಚ್ 16ರಂದು ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಮಾರ್ಚ್ 17ರಂದು ಮಾಹಿತಿ ತಂತ್ರಜ್ಞಾನ, ರೀಟೈಲ್‌, ಆಟೊಮೊಬೈಲ್‌, ಆರೋಗ್ಯ, ಸೌಂದರ್ಯ ಮತ್ತು ಕ್ಷೇಮಶಾಸ್ತ್ರ, ಮಾರ್ಚ್ 18ರಂದು ಭೂಗೋಳಶಾಸ್ತ್ರ, ಜೀವಶಾಸ್ತ್ರ, ಮಾರ್ಚ್ 20ರಂದು ಇತಿಹಾಸ, ಭೌತಶಾಸ್ತ್ರ, ಮಾರ್ಚ್ 21ರಂದು ಹಿಂದಿ,ಮಾರ್ಚ್ 23ರಂದು ಇಂಗ್ಲಿಷ್‌, ಮಾರ್ಚ್ 25ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಮಾರ್ಚ್ 27ರಂದು ಐಚ್ಚಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ, ಮಾರ್ಚ್ 29ರಂದು ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

ಒಂದು ವೇಳೆ ನಿಗದಿಯಾದ ಈ ವೇಳಾಪಟ್ಟಿಯಲ್ಲಿ ಆಕ್ಷೇಪಣೆಗಳು,ಅಸಮಾಧಾನಗಳು ಇದ್ದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ನ.11ರ ಸಂಜೆ 5.30ರ ಒಳಗೆ jdexm.dpue@gmail.comಗೆ ಸಲ್ಲಿಸಬಹುದು ಎಂದೂ ತಿಳಿಸಿದೆ.

Join Whatsapp
Exit mobile version