Home ಟಾಪ್ ಸುದ್ದಿಗಳು 2 ಕೋಟಿ ಬಿಗ್ ಬಾಸ್ಕೆಟ್ ಗ್ರಾಹಕರ ದತ್ತಾಂಶ ಸೋರಿಕೆ ಶಂಕೆ | ಬೆಂಗಳೂರಿನಲ್ಲಿ ದೂರು ದಾಖಲು

2 ಕೋಟಿ ಬಿಗ್ ಬಾಸ್ಕೆಟ್ ಗ್ರಾಹಕರ ದತ್ತಾಂಶ ಸೋರಿಕೆ ಶಂಕೆ | ಬೆಂಗಳೂರಿನಲ್ಲಿ ದೂರು ದಾಖಲು

ಬೆಂಗಳೂರು : ಆನ್ ಲೈನ್ ದಿನಸಿ ಮಾರುಕಟ್ಟೆ ‘ಬಿಗ್ ಬಾಸ್ಕೆಟ್’ ಗ್ರಾಹಕರ ದತ್ತಾಂಶಗಳು ಸೋರಿಕೆಯಾಗಿವೆ ಎಂದು ದೂರು ದಾಖಲಾಗಿದೆ. ಸುಮಾರು 2 ಕೋಟಿ ಗ್ರಾಹಕರ ದತ್ತಾಂಶ ಸೋರಿಕೆಯಾಗಿದೆ ಎಂದು ‘ಬಿಗ್ ಬಾಸ್ಕೆಟ್’ ಬೆಂಗಳೂರಿನಲ್ಲಿ ದೂರು ದಾಖಲಿಸಿದೆ. ಅಮೆರಿಕ ಮೂಲದ ಸೈಬರ್ ಭದ್ರತೆ ಗುಪ್ತಚರ ‘ಸೈಬಲ್’, ಹ್ಯಾಕರ್ ಒಬ್ಬ ರೂ.30 ಲಕ್ಷಕ್ಕೆ ದತ್ತಾಂಶ ಮಾರಾಟಕ್ಕಿಟ್ಟಿದ್ದಾನೆ ಎಂದಿದೆ.

ನಮ್ಮ ದಿನನಿತ್ಯದ ಡಾರ್ಕ್ ವೆಬ್ ನಿರ್ವಹಣೆಯ ವೇಳೆ, ಸೈಬಲ್ ನ ಸಂಶೋಧಕರು ಬಿಗ್ ಬಾಸ್ಕೆಟ್ ದತ್ತಾಂಶ ಸೈಬರ್ ಕ್ರೈಂ ಮಾರ್ಕೆಟ್ ನಲ್ಲಿ 40,000 ಡಾಲರ್ ಗೆ ಮಾರಾಟಕ್ಕಿದೆ ಎಂದು ಸಂಸ್ಥೆ ತನ್ನ ಬ್ಲಾಗ್ ನಲ್ಲಿ ಪೋಸ್ಟ್ ಮಾಡಿದೆ.

ಆದಾಗ್ಯೂ, ತಮ್ಮ ಗ್ರಾಹಕರ ಹಣಕಾಸು ದತ್ತಾಂಶ ಸುರಕ್ಷಿತವಾಗಿದೆ ಎಂಬ ಭರವಸೆಯಿದೆ. ದತ್ತಾಂಶ ಸೋರಿಕೆಯಾಗಿದೆ ಎನ್ನಲಾದ ಬಗ್ಗೆ ಕೆಲವು ದಿನಗಳ ಹಿಂದೆ ಗಮನಕ್ಕೆ ಬಂದಿದೆ. ಈ ಬಗ್ಗೆ ದೃಢೀಕರಣಕ್ಕೆ ತಜ್ಞರ ತಂಡ ಕಾರ್ಯನಿರ್ವಹಿಸುತ್ತಿದೆ.  ಬಗ್ಗೆ ದೂರು ದಾಖಲಾಗಿದೆ.   

Join Whatsapp
Exit mobile version