ಬೆಂಗಳೂರು: ಸರ್ಕಾರಿ ಭೂಮಿ, ರಾಜ ಕಾಲುವೆ, ದಲಿತರ ಭೂಮಿಯನ್ನು ಬಲವಂತವಾಗಿ ಬೇನಾಮಿಯಾಗಿ ಆಕ್ರಮ ಮಾಡಿ ವಂಚನೆ ಮಾಡುತ್ತಿರುವ ಹೆಣ್ಣೂರಿನ ಎಚ್.ಎಸ್. ಶಿವಕುಮಾರ್ ಬಿನ್ ಸೊಣ್ಷಪ್ಪ ಸಹೋದರರ ಮೇಲೆ ಕ್ರಮ ಜರುಗಿಸಿ ಸರ್ಕಾರಿ ಭೂಮಿಯನ್ನು ಸಂರಕ್ಷಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಣ್ಣೂರಿನ ಶಿವಕುಮಾರ್ ಮತ್ತು ಅವರ ಸಹೋದರರು ಸರ್ಕಾರಿ ಭೂಮಿ ಹಾಗೂ ದಲಿತರ ಭೂಮಿಗಳನ್ನು ದೌರ್ಜನ್ಯದಿಂದ ಆಕ್ರಮಿಸಿಕೊಂಡು ಈ ಭೂಮಿಗಳಲ್ಲಿ ಫಿಲ್ಟರ್ ಮರಳು ದಂಧೆ ನಡೆಸಿ, ರಾಜಕಾರಣಿಗಳು ಅಧಿಕಾರಿಗಳ ಜತೆ ಶಾಮೀಲಾಗಿ ಸರ್ಕಾರಿ ಭೂಮಿಯನ್ನು ಹಳ್ಳಗಳಾನ್ನಾಗಿ ಮಾಡಿ ಜನರು ಪ್ರಾಣ ಕಳೆದುಕೊಳ್ಳುವ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿದರು.
ಶಿವಕುಮಾರ್ ಸಹೋದರರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನ ಹಳ್ಳಿ ತಾಲೂಕು ಕಂದಾಣ ಹೋಬಳಿ, ತೈಲಗೆರೆ ಗ್ರಾಮದ ಸರ್ವೆ ನಂ.110 ಮತ್ತು ಸುತ್ತಮುತ್ತಲು ಸರ್ಕಾರಿ ಜಮೀನಿನಲ್ಲಿ ಪಿಲ್ಟರ್ ಮರಳು ದಂದೆ ನಡೆಸಿರುವುದು ಸಾಬೀತಾಗಿದ್ದು, ಆಗಿರುವ ಅನಾಹುತಕ್ಕೆ 2ಕೋಟಿ 18ಲಕ್ಷ 53 ಸಾವಿರದ 800ರೂಪಾಯಿ ವಸೂಲೊ ಮಾಡುವಂತೆ ಗ್ರಾಮಾಂತರ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ. ಆದರೆ ಅಧಿಕಾರಿಗಳಿಗೆ ಬೆದರಿಕೆ ಹಾಕುವ ಮೂಲಕ ಇದರಿಂದ ತಪ್ಪಸಿಕೊಳ್ಳುತ್ತಿದ್ದಾರೆ. ತನಿಖಾಧಿಕಾರಿಗಳನ್ನೆ ಕೊಲೆ ಮಾಡುವ ಮಟ್ಟಕ್ಕೆ ತಮ್ಮ ಲಾಭಿ ಹೊಂದಿದ್ದಾರೆ ಎಂದು ಆರೋಪಿಸಿದರು.
ಇವರ ಭೂಗಳ್ಳತನವನ್ನು ತಪ್ಪಿಸಲು ಎಸ್ ಐಟಿ ತನಿಖೆಗೆ ಈ ಪ್ರಕರಣವನ್ನು ವಹಿಸಬೇಕೆಂದು ಆಗ್ರಹಿಸಿದರು. ಸುದ್ದಿಗೋಷ್ಢಿಯಲ್ಲಿ ಬೇಗೂರು ಮುನಿರಾಜು, ಜಿಲ್ಲಾ ಸಂಘಟನಾ ಸಂಚಾಲಕರಾದ ಸೂರಹುಣಸೆ ಸುಬ್ರಹ್ಮಣಿ, ಪರಮೇಶ ಮತ್ತಿತರರು ಹಾಜರಿದ್ದರು.