ಸಾಮಾನ್ಯ ಆರೋಪಿಗೆ ಕೊಡುವ ಟ್ರೀಟ್‌ ಮೆಂಟ್‌ ನಟ ದರ್ಶನ್‌ ಗೂ ಕೊಡಬೇಕು: ಜಗದೀಶ್ ಶೆಟ್ಟರ್

Prasthutha|

- Advertisement -

ಹುಬ್ಬಳ್ಳಿ: ಸಾಮಾನ್ಯ ಆರೋಪಿಗೆ ಕೊಡುವ ಟ್ರೀಟ್‌ ಮೆಂಟ್‌ ಅನ್ನೇ ನಟ ದರ್ಶನ್‌ ಗೂ ಕೊಡಬೇಕು, ದರ್ಶನ್‌ ಗೆ ಯಾವ ರಾಜ ಮರ್ಯಾದೆಯ ಅವಶ್ಯಕತೆಯಿಲ್ಲ ಎಂದು ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಜೊತೆ ಮಾತನಾಡಿದ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್, ಕಾನೂನಿನ ಮುಂದೆ ಯಾರು ದೊಡ್ಡವರಲ್ಲ. ಕಾನೂನನ್ನು ಯಾರು ಕೈಗೆ ತೆಗೆದುಕೊಳ್ಳ ಬಾರದು. ಸಾಮಾಜಿಕ ಜಾಲತಾಣದಲ್ಲಿನ ಅಶ್ಲೀಲ ಮೆಸೇಜ್ ಗಾಗಿ ಕೊಲೆ ಯಾಕೆ ಮಾಡಬೇಕು? ಅದಕ್ಕಾಗಿಯೇ ಸೈಬರ್ ಕ್ರೈಮ್ ಇದೆ, ಅಲ್ಲಿ ದೂರು ಕೊಡಬಹುದಿತ್ತಲ್ಲ. ಒಬ್ಬ ಸಿನಿಮಾ ನಟ ಆ ವ್ಯಕ್ತಿಯನ್ನ ಕೊಲೆ ಮಾಡಬಾರದಿತ್ತು. ಆರೋಪಿಗೆ ಯಾವ ರೀತಿ ಟ್ರೀಟ್ಮೆಂಟ್ ಕೊಡ್ತಾರೆಯೋ ಹಾಗೆಯೇ ದರ್ಶನ್‌ಗೂ ಕೊಡಬೇಕು ಎಂದ ಜಗದೀಶ್ ಶೆಟ್ಟರ್, ನಟ ಆಗಲಿ ಸಾಮಾನ್ಯ ಜನರಾಗಲಿ ತಾರತಮ್ಯ ಆಗಬಾರದು ಎಂದು ಹೇಳಿದರು.

Join Whatsapp
Exit mobile version