Home ಟಾಪ್ ಸುದ್ದಿಗಳು ಅಪಾಯಕಾರಿ ವ್ಹೀಲಿಂಗ್ | ಮೂವರು ಸೆರೆ

ಅಪಾಯಕಾರಿ ವ್ಹೀಲಿಂಗ್ | ಮೂವರು ಸೆರೆ

ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದಲ್ಲಿ  ಅಪಾಯಕಾರಿಯಾಗಿ ವ್ಹೀಲಿಂಗ್ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಗೌರವ್ ಅಲಿಯಾಸ್ ಪಿಲ್ಲು ಮತ್ತು ಹಿಂಬದಿ ಸವಾರ ಶ್ರೇಯಸ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಜಯನಗರದದ ಫ್ಲೈಓವರ್ ಮೇಲೆ ಬೈಕ್​​​​ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದರು.ಇವರ ಬಳಿ ಡ್ರೈವಿಂಗ್ ಲೈಸೆನ್ಸ್ ಸಹ ಇರಲಿಲ್ಲ. ಹೀಗಾಗಿ, ಜಯನಗರ ಸಂಚಾರ ಪೊಲೀಸರು ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಬ್ಬ ಸೆರೆ:

ಇದರ ಜೊತೆಗೆ ಕೆಜಿಹಳ್ಳಿ ಸಂಚಾರ ಪೊಲೀಸರು ವ್ಹೀಲಿಂಗ್ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಗೋವಿಂದಪುರ ಜಂಕ್ಷನ್ ಬಳಿ ಯುವಕ ಅಪಾಯಕಾರಿಯಾಗಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಮಾಹಿತಿ ದೊರೆತಿತ್ತು. ವ್ಹೀಲಿಂಗ್ ಮಾಡುವ ದೃಶ್ಯ ಸ್ಥಳೀಯರು ಮೊಬೈಲ್​​​​​ನಲ್ಲಿ ಸೆರೆ ಹಿಡಿದಿದ್ದರು.

ವ್ಹೀಲಿಂಗ್ ಮಾಡಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಿ ಕೆಜಿಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಕರಣದ ಬಗೆಗೆ ಮಾಹಿತಿ ನೀಡಿದ್ದಾರೆ.

Join Whatsapp
Exit mobile version