Home ಟಾಪ್ ಸುದ್ದಿಗಳು ಸಾರ್ವಜನಿಕ ಸ್ಥಳದಲ್ಲಿ ಕಬ್ಬಿನ ಹಾಲಿನ ಅಂಗಡಿ ಇಟ್ಟಿದ್ದಕ್ಕೆ ದಲಿತರ ಮೇಲೆ ಹಲ್ಲೆ !

ಸಾರ್ವಜನಿಕ ಸ್ಥಳದಲ್ಲಿ ಕಬ್ಬಿನ ಹಾಲಿನ ಅಂಗಡಿ ಇಟ್ಟಿದ್ದಕ್ಕೆ ದಲಿತರ ಮೇಲೆ ಹಲ್ಲೆ !

ಹಾಸನ: ಸಾರ್ವಜನಿಕ ಸ್ಥಳದಲ್ಲಿ ಕಬ್ಬಿನ ಹಾಲಿನ ಅಂಗಡಿ ಇಟ್ಟಿದ್ದಕ್ಕೆ ದಲಿತರ ಮೇಲೆ ಹಲ್ಲೆ ನಡೆಸಿರುವ ಘಟನೆ ಅರಕಲಗೂಡು ತಾಲೂಕಿನ ರುದ್ರಪಟ್ಟಣ ಸಮೀಪ ನಡೆದಿದೆ.

ರಾಮನಾಥಪುರ ಹೋಬಳಿಯ ರುದ್ರಪಟ್ಟಣ ಗ್ರಾಮದ ಪರಿಶಿಷ್ಟ ಸಮುದಾಯದ ಚಂದ್ರ ಹಾಗೂ ಅವರ ಮಗ ನಿತಿನ್‌ ಹಲ್ಲೆಗೊಳಗಾದ ವ್ಯಕ್ತಿಗಳು.

ಸುಮಾರು ಆರು ತಿಂಗಳಿಂದ ಗಂಗೂರಿನ ಹ್ಯಾಂಡ್‌‌ ಪೋಸ್ಟ್‌ ಬಳಿ ಕಬ್ಬಿನ ಹಾಲಿನ ಗಾಡಿಯನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು.

ಗಂಗೂರಿನ ನಿವಾಸಿ ಸುನಿಲ್‌ ಎಂಬಾತ ನನ್ನ ಬಳಿ ಬಂದು ಕೂಡಲೇ ಗಾಡಿ ತೆಗೆಯಬೇಕೆಂದು ಹೇಳಿ, ಜಾತಿ ನಿಂದನೆ ಮಾಡಿ ಎಂದು ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ ಎಂದು ಇದೀಗ ಚಂದ್ರು ಗಂಭೀರ ಆರೋಪ ಮಾಡಿದ್ದಾರೆ.

ಈ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Join Whatsapp
Exit mobile version