Home ಟಾಪ್ ಸುದ್ದಿಗಳು ಮದುವೆ ಸಮಾರಂಭದಲ್ಲಿ ಆಹಾರ ಮುಟ್ಟಿದ್ದಕ್ಕಾಗಿ ದಲಿತ ಯುವಕನಿಗೆ ಥಳಿತ

ಮದುವೆ ಸಮಾರಂಭದಲ್ಲಿ ಆಹಾರ ಮುಟ್ಟಿದ್ದಕ್ಕಾಗಿ ದಲಿತ ಯುವಕನಿಗೆ ಥಳಿತ

ಲಕ್ನೋ: ಮದುವೆ ಸಮಾರಂಭದಲ್ಲಿ ಆಹಾರವನ್ನು ಮುಟ್ಟಿದ್ದಾನೆ ಎಂದು ಆರೋಪಿಸಿ 18 ವರ್ಷದ ದಲಿತ ಯುವಕನೊಬ್ಬನನ್ನು ನಿಂದಿಸಿ ಅಮಾನುಷವಾಗಿ ಥಳಿಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ವಜೀರ್ ಗಂಜ್’ನಲ್ಲಿ ನಡೆದಿದೆ.

ನೌಬಸ್ತಾ ಗ್ರಾಮದ ಲಲ್ಲಾ(18), ಸಂದೀಪ್ ಪಾಂಡೆ ಎಂಬುವವರ ಮನೆಯಲ್ಲಿ ಏರ್ಪಡಿಸಲಾಗಿದ್ದ ಔತಣಕೂಟದಲ್ಲಿ ಪಾಲ್ಗೊಂಡಿದ್ದ. ಅಲ್ಲಿ ಆತ ಭೋಜನಕ್ಕಾಗಿ  ಒಂದು ತಟ್ಟೆಯನ್ನು ತೆಗೆದುಕೊಂಡ ತಕ್ಷಣ, ಸಂದೀಪ್ ಮತ್ತು ಅವನ ಸಹೋದರರು ಆತನನ್ನು ನಿಂದಿಸಿ ಥಳಿಸಿದ್ದಾರೆ. ಲಲ್ಲಾನ ಹಿರಿಯ ಸಹೋದರ ಸತ್ಯಪಾಲ್, ತಮ್ಮನನ್ನು ರಕ್ಷಿಸಲು ಮುಂದಾದಾಗ, ಆತನನ್ನು ಥಳಿಸಿ ಅವರ ಮೋಟಾರ್ ಸೈಕಲ್’ಗೆ ಹಾನಿ ಮಾಡಿದ್ದಾರೆ.

ಈ ಬಗ್ಗೆ ಗ್ರಾಮ ಪ್ರಧಾನ ಮತ್ತು ಗ್ರಾಮದ ಹಿರಿಯರಿಗೆ ಗ್ರಾಮದ ನಿವಾಸಿಗಳು ದೂರು ನೀಡಿದ್ದರು.

ಈ ಸಂಬಂಧ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಾದ ಸಂದೀಪ್ ಪಾಂಡೆ, ಅಮರೇಶ್ ಪಾಂಡೆ, ಶ್ರವಣ್ ಪಾಂಡೆ, ಸೌರಭ್ ಪಾಂಡೆ, ಅಜಿತ್ ಪಾಂಡೆ, ವಿಮಲ್ ಪಾಂಡೆ ಮತ್ತು ಅಶೋಕ್ ಪಾಂಡೆ ವಿರುದ್ಧ ಎಫ್’ಐಆರ್ ದಾಖಲಿಸಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುವುದು ಎಂದು ಗೊಂಡಾದ ಎಎಎಸ್ಪಿ ಶಿವರಾಜ್ ತಿಳಿಸಿದ್ದಾರೆ.

Join Whatsapp
Exit mobile version