Home ಟಾಪ್ ಸುದ್ದಿಗಳು ದಲಿತರ ಮದುವೆ ಮೆರವಣಿಗೆಗೆ ಕಲ್ಲು ತೂರಾಟ: ಆರೋಪಿಗಳ ಮನೆಗಳನ್ನು ಬುಲ್ಡೋಜರ್ ಮೂಲಕ ಕೆಡವಿದ ಮಧ್ಯಪ್ರದೇಶ ಸರ್ಕಾರ

ದಲಿತರ ಮದುವೆ ಮೆರವಣಿಗೆಗೆ ಕಲ್ಲು ತೂರಾಟ: ಆರೋಪಿಗಳ ಮನೆಗಳನ್ನು ಬುಲ್ಡೋಜರ್ ಮೂಲಕ ಕೆಡವಿದ ಮಧ್ಯಪ್ರದೇಶ ಸರ್ಕಾರ

ರಾಜಗಢ: ದಲಿತ ವ್ಯಕ್ತಿಯೊಬ್ಬರ ಮದುವೆ ಮೆರವಣಿಗೆಯ ಮೇಲೆ ಕಲ್ಲು ಎಸೆದ ಆರೋಪದ ಮೇಲೆ ಎಂಟು ಮಂದಿ ಆರೋಪಿಗಳ ಮನೆಯನ್ನು ಮಧ್ಯಪ್ರದೇಶ ಸರ್ಕಾರ ಬುಲ್ಡೋಜರ್ ಮೂಲಕ ಧ್ವಂಸಗೊಳಿಸಿದೆ.

ರಾಜಗಢ ಜಿಲ್ಲೆಯ ಜಿರಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಂಬಂಧಪಟ್ಟ 21ಮಂದಿ ಆರೋಪಿಗಳ ಪೈಕಿ 8 ಮಂದಿಯ ಮನೆಗಳನ್ನು ಈಗಾಗಲೇ ನೆಲಸಮ ಮಾಡಲಾಗಿದೆ. ಪೊಲೀಸ್ ಬಂದೋಬಸ್ತ್‌ನೊಂದಿಗೆ ಕಂದಾಯ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳ ಸಮ್ಮುಖದಲ್ಲಿ ಪೌರಕಾರ್ಮಿಕರು ಮನೆಗಳನ್ನು ನೆಲಸಮಗೊಳಿಸಿದ್ದಾರೆ.

ವಧುವಿನ ಕಡೆಯುವರು ವರನ ಮೆರವಣಿಗೆ ನಡೆಸುತ್ತಿದ್ದರು. ಈ ವೇಳೆ ಡಿಜೆಯನ್ನೂ ಹಾಕಲಾಗಿತ್ತು. ಆದರೆ ಮೆರವಣಿಗೆಯು ಧಾರ್ಮಿಕ ಕೇಂದ್ರವೊಂದರ ಬಳಿ ಸಾಗಿದಾಗ ಡಿಜೆ ಹಾಕಿರುವುದಕ್ಕೆ ಕೆಲವರು ಆಕ್ಷೇಪಿಸಿದ್ದರು. ಹೀಗಾಗಿ ಧಾರ್ಮಿಕ ಕೇಂದ್ರದ ಬಳಿ ಡಿಜೆ ನಿಲ್ಲಿಸಲಾಗಿತ್ತು.ಧರ್ಮಿಕ ಕೇಂದ್ರ ದಾಟಿದ ಬಳಿಕ ಮತ್ತೆ ಹಾಕಲಾಗಿತ್ತು.

 ಆದರೂ ಕೆಲವು ಕಿಡಿಗೇಡಿಗಳು ಮೆರವಣಿಗೆ ಸಾಗುತ್ತಿದ್ದವರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಮೂವರಿಗೆ ಗಾಯಗಳಾಗಿವೆ.

ವಧುವಿನ ತಂದೆಯ ದೂರಿನ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಲ್ಲದೆ, 21 ಆರೋಪಿಗಳನ್ನು  ಗುರುತಿಸಿದ್ದರು. ಈ ಪೈಕಿ ಎಂಟು ಮಂದಿಯ ಮನೆಯನ್ನು ಧ್ವಂಸ ಮಾಡಲಾಗಿದೆ.

Join Whatsapp
Exit mobile version