ಹೈದರಾಬಾದ್: ಕುಟುಂಬಸ್ಥರ ವಿರೋಧದ ಮಧ್ಯೆ ಮುಸ್ಲಿಂ ಸಮುದಾಯದ ಯುವತಿಯೊಬ್ಬಳನ್ನು ಮದುವೆಯಾದ ದಲಿತ ಯುವಕನನ್ನು ಯುವತಿಯ ಸಂಬಂಧಿಕರು ಕೊಲೆ ಮಾಡಿರುವ ಘಟನೆ ತೆಲಂಗಾಣದ ಸರೂರ್ ನಗರದಲ್ಲಿ ನಡೆದಿದೆ.
26 ವರ್ಷದ ದಲಿತ ಯುವಕ ಬಿಲ್ಲಿಪುರಂ ನಾಗರಾಜು ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ.
ದಂಪತಿ ತಮ್ಮ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದಾಗ ಪತ್ನಿಯ ಸಹೋದರ ಮತ್ತು ಅವರ ಸಂಬಂಧಿಯೋರ್ವ ಯುವಕನನ್ನು ನೆಲಕ್ಕೆ ತಳ್ಳಿ ರಾಡ್ ಗಳಿಂದ ಥಳಿಸಿದ್ದಾರೆ. ನಂತರ ಚಾಕುವಿನಿಂದ ಇರಿದಿದ್ದು, ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.