ಉ.ಪ್ರ. | ಸರಕಾರಿ ಹ್ಯಾಂಡ್ ಪಂಪ್ ಬಳಕೆ ಮಾಡಿದ ದಲಿತನಿಗೆ ಥಳಿಸಿದ ಯಾದವ ಸಮುದಾಯದ ಜಾತಿವಾದಿ ಉಗ್ರರು

Prasthutha|

ಲಖನೌ : ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ 45ರ ಹರೆಯದ ದಲಿತ ವ್ಯಕ್ತಿಯೊಬ್ಬರು ಸರಕಾರಿ ಹ್ಯಾಂಡ್ ಪಂಪ್ ಬಳಕೆ ಮಾಡಿದ್ದಕ್ಕೆ ಗುಂಪೊಂದು ಥಳಿಸಿದ ಘಟನೆ ಶುಕ್ರವಾರ ವರದಿಯಾಗಿದೆ.

ಬಿಸಂಡಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್ ಐಆರ್ ದಾಖಲಾಗಿದೆ. ರಾಮ್ ದಯಾಳ್ ಯಾದವ್ ಮತ್ತು ಆತನ ಕುಟುಂಬ ತನ್ನ ಮೇಲೆ ಕೋಲುಗಳಿಂದ ಹಲ್ಲೆ ನಡೆಸಿದೆ. ತೆಂಡೂರ ಗ್ರಾಮದಲ್ಲಿ ಹ್ಯಾಂಡ್ ಪಂಪ್ ನಿಂದ ನೀರು ತೆಗೆಯಲು ಹೋದಾಗ ಅವರು ಹಲ್ಲೆ ನಡೆಸಿದ್ದಾರೆ ಎಂದು ರಾಮಚಂದ್ರ ರಯಿದಾಸ್ ದೂರು ನೀಡಿದ್ದಾರೆ.

- Advertisement -

ಗಾಯಗೊಂಡಿರುವ ರಾಮಚಂದ್ರ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡು ತಿಂಗಳ ಹಿಂದೆ ಹ್ಯಾಂಡ್ ಪಂಪ್ ನಿಂದ ನೀರು ತೆಗೆಯುವುದಕ್ಕೆ ದಲಿತರಿಗೆ ಸ್ಥಳೀಯ ಯಾದವರು ಬಹಿಷ್ಕಾರ ಹಾಕಿದ್ದರು. ಸ್ಥಳೀಯ ಅಧಿಕಾರಿಗಳ ಮಧ್ಯಪ್ರವೇಶಿಕೆಯಲ್ಲಿ ಅದು ಇತ್ಯರ್ಥಗೊಂಡಿತ್ತು. ಆದರೂ, ಇಂದು ಮತ್ತೆ ದಾಳಿ ನಡೆದಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

- Advertisement -